ಯಲ್ಲಾಪುರ: ಪಟ್ಟಣದ ಶಾರದಾಗಲ್ಲಿ ಮತ್ತು ನೂತನ ನಗರದಲ್ಲಿ ಕುಡಿಯುವ ನೀರಿನ ಘಟಕವನ್ನು ತಕ್ಷಣ ಆರಂಭಿಸುವಂತೆ ಆಗ್ರಹಿಸಿ ಬಿಜೆಪಿ ಶುಕ್ರವಾರ ಪಟ್ಟಣ ಪಂಚಾಯಿತಿ ಎದುರಿಗೆ ತಮಟೆ ಬಡಿದು ಪ್ರತಿಭಟನೆ ನಡೆಸಿತು.

ಶಾರದಾಗಲ್ಲಿ ಮತ್ತು ನೂತನ ನಗರದಲ್ಲಿ ಕುಡಿಯುವ ನೀರಿನ ಘಟಕ ನಿಮಿ೯ಸಿ 4-5 ವರ್ಷ ಕಳೆಯಿತು. ಆದರೆ ಇದುವರೆಗೂ ನೀರಿನ ಸೌಲಭ್ಯ ಒದಗಿಸಲಾಗಿಲ್ಲ. ಇದರಿಂದ ಸ್ಥಳೀಯರಿಗೆ ನೀರಿನ ತೊಂದರೆ ಆಗುತ್ತದೆ. ಕಾರಣ ತಕ್ಷಣ ನೀರಿನ ಸೌಲಭ್ಯ ಕಲ್ಪಿಸಿ, ಕುಡಿಯುವ ನೀರಿನ ಘಟಕ ಜನರಿಗೆ ಉಪಯೋಗ ಆಗುವಂತೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನಾಕಾರರ ಮನವಿಗೆ ಸ್ಪಂದಿಸಿದ ತಹಶೀಲ್ದಾರ ಚಂದ್ರಶೇಖರ ಹೊಸಮನಿ ನಾಳೆಯಿಂದಲೇ ಕುಡಿಯುವ ನೀರಿನ ಘಟಕ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೇಶವ ಚೌಗಲೆ ಇದ್ದರು.

ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ಪ್ರಮುಖರಾದ ಸೋಮೇಶ್ವರ ನಾಯ್ಕ, ವಿನೋದ ತಳೇಕರ, ಪ್ರದೀಪ ಯಲ್ಲಾಪುರಕರ, ರಾಮು ನಾಯ್ಕ, ಶ್ಯಾಮಿಲಿ ಪಾಟಣಕರ, ನಾಗೇಶ ಯಲ್ಲಾಪುರಕರ, ಮಹೇಶ ನಾಯ್ಕ, ರಜತ ಬದ್ದಿ, ತುಳಸಿದಾಸ ನಾಯ್ಕ, ಸುನೀಲ ಶೇಟ, ಬಾಬಾ ರಾಮ ದೇಸಾಯಿ, ರಜನಿ ಚಂದ್ರಶೇಖರ, ಗಿರೀಷ ಭೋವಿವಡ್ಡರ, ಉಲ್ಲಾಸ ಕೊಂಡೆಮನೆ, ಮಂಜುನಾಥ ಹರಿಜನ, ಶೋಭಾ ಭಟ್ಟ, ಸಂಜು ಅಂಕೋಲೆಕರ, ಗೀರೀಷ ಪೈ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-20-705851943

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.