ಯಲ್ಲಾಪುರ: ‘ರೈತರು ಅಡಿಕೆಯೊಂದಿಗೆ ಉಪ ಉತ್ಪನ್ನವಾಗಿ ಕಾಫಿ ಬೆಳೆಯುವತ್ತ ಹೆಚ್ಚಿನ ಒಲವು ತೋರಬೇಕು’ ಎಂದು ಶಿರಸಿಯ ಕದಂಬ ಮಾರ್ಕೆಟಿಂಗ್ ಅಧ್ಯಕ್ಷ ಶಂಭುಲಿಂಗ ಹೆಗಡೆ ಸಲಹೆ ನೀಡಿದರು.

ತಾಲ್ಲೂಕಿನ ಉಮ್ಮಚ್ಗಿಯಲ್ಲಿ ಕದಂಬ ಸೌಹಾರ್ದ ಸಹಕಾರಿ ಹಾಗೂ ಉಮ್ಮಚ್ಗಿ ಸೊಸೈಟಿ ವತಿಯಿಂದ ಗುರುವಾರ ನಡೆದ ‘ಅಡಿಕೆ ಸಮೃದ್ಧಿಗಾಗಿ ಅಂತರ ಬೆಳೆಯಾಗಿ ಕಾಫಿ’ ಎಂಬ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ರೈತರು ಸಹಕಾರಿ ಸಂಘಗಳ ಮೂಲಕವೇ ತಮ್ಮ ಫಸಲನ್ನು ಮಾರಾಟ ಮಾಡಿದರೆ ಅನುಕೂಲ. ರೈತರು ಸಂಕಷ್ಟದಲ್ಲಿದ್ದಾಗ ಸಹಕಾರಿ ಸಂಘಗಳು ಸ್ಪಂದಿಸುತ್ತವೆ’ ಎಂದರು.

ಪ್ರಗತಿಪರ ಕೃಷಿಕ ಸೀತಾರಾಮ ಹೆಗಡೆ ನೀರ್ನಳ್ಳಿ ಮಾತನಾಡಿ, ‘ಕಾಫಿ ನಮಗೆ ಉತ್ತಮ ಆದಾಯ ನೀಡುತ್ತದೆ. ತೋಟದಲ್ಲಿ ಕಾಫಿ ಎಲೆಗಳು ಉದುರಿದ್ದರಿಂದ ಅಡಿಕೆ ಉತ್ಪನ್ನ ಹೆಚ್ಚುತ್ತದೆ’ ಎಂದರು.

ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರವಿ ಹೆಗಡೆ ಹುಳಗೋಳ, ಹಾಸನದ ಭಾರತೀಯ ಕಾಫಿ ಮಂಡಳಿಯ ಜಂಟಿ ನಿರ್ದೇಶಕ ನವೀನ್ ಕುಮಾರ್, ಮೂಡಿಗೆರೆ ಗೌಡಳ್ಳಿಯ ಪ್ರಗತಿಪರ ಕೃಷಿಕ ಜಿ.ಎಂ. ಲಕ್ಷ್ಮಣ ಗೌಡ, ಚಿಕ್ಕಮಗಳೂರು ಭಾರತೀಯ ಕಾಫಿ ಮಂಡಳಿ ಉಪ ನಿರ್ದೇಶಕ ವೆಂಕಟರೆಡ್ಡಿ ವೈ.ಬಿ. ಮಾತನಾಡಿದರು.

ಉಮ್ಮಚ್ಗಿ ಸೊಸೈಟಿ ಅಧ್ಯಕ್ಷ ಎಂ.ಜಿ. ಭಟ್ಟ ಸಂಕದಗುಂಡಿ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಮುಖಾರಿಬ್ ಡಿ.ಎಸ್. ಸಂವಾದ ನಡೆಸಿದರು. ವಿಶ್ವೇಶ್ವರ ಭಟ್ಟ, ನಾಗೇಂದ್ರ ಗೌಡ, ವಿಕಾಸ ಹೆಗಡೆ ಮಾವಿನಕೊಪ್ಪ, ಉದಯ ಭಟ್ಟ ಕಲ್ಲಳ್ಳಿ ಇದ್ದರು. ಪ್ರಗತಿಪರ ಕಾಫಿ ಬೆಳೆಗಾರ ಶ್ರೀಧರ ಭಟ್ಟ ಹೊಸ್ಮನೆ ಅವರ ತೋಟದಲ್ಲಿ ಕ್ಷೇತ್ರ ಭೇಟಿ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-20-27327796

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.