ಯಲ್ಲಾಪುರ: ‘ಪರಿಸರ ಸಮತೋಲನ ಕಾಪಾಡುವಲ್ಲಿ ಒಂದು ಚಿಕ್ಕ ಪಕ್ಷಿಯೂ ಕೂಡ ದೊಡ್ಡ ಬದಲಾವಣೆಗೆ ಕಾರಣವಾಗಬಹುದು’ ಎಂದು ಮಂಚಿಕೇರಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿ ಸಂಗಮೇಶ ಪ್ರಭಾಕರ್ ಹೇಳಿದರು.

ತಾಲ್ಲೂಕಿನ ಚಿಪಗೇರಿ ವನಸಿರಿ ಕಲ್ಯಾಣ ವಸತಿ ನಿಲಯದಲ್ಲಿ ಜೀವನ ವಿಕಾಸ ಟ್ರಸ್ಟ್ ಹಾಗೂ ವನಸಿರಿ ಕಲ್ಯಾಣ ಕರ್ನಾಟಕ ಆಶ್ರಯದಲ್ಲಿ ಈಚೆಗೆ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಜಾಗತಿಕ ತಾಪಮಾನ ಏರಿಕೆ, ಅತಿಯಾದ ರಾಸಾಯನಿಕಗಳ ಬಳಕೆ, ತಾಂತ್ರಿಕತೆ ಅಳವಡಿಕೆ ಹಾಗೂ ಪಕ್ಷಿಗಳ ಮಹತ್ವದ ಕುರಿತು ಅರಿವಿನ ಕೊರತೆಯಿಂದಾಗಿ ಗುಬ್ಬಚ್ಚಿಗಳ ಸಂತತಿ ನಶಿಸುತ್ತಿದೆ. ಗುಬ್ಬಚ್ಚಿಗಳು ಚಿಕ್ಕ ಚಿಕ್ಕ ಹುಳಗಳನ್ನು ತಿನ್ನುತ್ತವೆ. ಇದು ಬೆಳೆಗಳನ್ನು ಕೀಟಗಳ ಬಾಧೆಯಿಂದ ರಕ್ಷಿಸುತ್ತದೆ. ಗುಬ್ಬಚ್ಚಿಗಳು ಬೀಜ ಪ್ರಸರಣ ಕ್ರಿಯೆಯಲ್ಲಿ ಹೆಚ್ಚು ಸಹಕಾರಿಯಾಗಿವೆ’ ಎಂದರು.

ಗುಬ್ಬಚ್ಚಿ ಜನರೊಂದಿಗೆ ಬೆರೆತು ಜೀವಿಸುವ ಒಂದು ವಿಶಿಷ್ಟ ಪಕ್ಷಿಯಾಗಿದೆ. ಇವು ಮನೆಯ ಗೋಡೆಗಳ ಚಿಕ್ಕ-ಚಿಕ್ಕ ಸಂದುಗಳಲ್ಲಿ ಗೂಡನ್ನು ನಿರ್ಮಿಸಿ ಬದುಕುತ್ತದೆ. ಆಧುನೀಕರಣದ ಅಳವಡಿಕೆಯಿಂದ, ಕಾಂಕ್ರೀಟ್ ಮಯವಾದ ಕಟ್ಟಡಗಳ ನಿರ್ಮಾಣದಿಂದ ಇವುಗಳಿಗೆ, ಈ ರೀತಿಯ ವಾಸಸ್ಥಾನದ ಅಭಾವ ಉಂಟಾಗುತ್ತಿದೆ. ಆದುದರಿಂದ ನಮ್ಮ ಮನೆಯ ಗೋಡೆಗಳ ಮುಂದೆ, ಕೃತಕವಾಗಿ ತಯಾರಿಸಿದ ಪರಿಸರ ಸ್ನೇಹಿಯಾದ ತೆಂಗಿನ ನಾರಿನಿಂದ ಹಾಗೂ ಬಿದಿರಿನಿಂದ ತಯಾರಿಸಿದ ಗೂಡುಗಳನ್ನು ನೇತು ಹಾಕಿದರೆ ಗುಬ್ಬಚ್ಚಿಗಳಿಗೆ ಸಹಾಯಕಾರಿಯಾಗುತ್ತದೆ’ ಎಂದರು.

‘ಬೇಸಿಗೆಯಲ್ಲಿ ಗುಬ್ಬಚ್ಚಿಗಳಿಗೆ ನೀರಿನ ದಾಹ ನೀಗಿಸಲು ಮನೆಯ ತಾರಸಿಯ ಮೇಲೆ ಹಾಗೂ ಅಂಗಳದಲ್ಲಿ ನೀರಿನ ಚಿಕ್ಕ- ಚಿಕ್ಕ ತೊಟ್ಟಿಗಳನ್ನು ನಿರ್ಮಿಸಿ ಗುಬ್ಬಚ್ಚಿಗಳಿಗೆ ಸಹಕರಿಸಿ’ ಎಂದರು.

ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಗುಬ್ಬಚ್ಚಿ ಗೂಡುಗಳನ್ನು ವಿತರಿಸಲಾಯಿತು. ಇಲಾಚಿ ಹಣ್ಣಿನ ಸಸಿಯನ್ನು ವಸತಿ ನಿಲಯದ ಆವರಣದಲ್ಲಿ ನೆಡಲಾಯಿತು.

ವನಸಿರಿ ಕಲ್ಯಾಣ ವಸತಿ ನಿಲಯದ ಅಧ್ಯಕ್ಷ ಸೋಮನಾಥ್ ಸಿದ್ಧಿ, ವಿಧಾನ ಪರಿಷತ್ ಸದಸ್ಯ ಶಾಂತಾರಾಂ ಸಿದ್ಧಿ, ಪ್ರಮುಖರಾದ ಗಣಪತಿ ಭಟ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-20-777588527

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.