ಯಲ್ಲಾಪುರ: ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ (ಟಿಎಂಎಸ್) ಆಡಳಿತ ಮಂಡಳಿ ಆಯ್ಕೆಗೆ ಚುನಾವಣೆ ನಡೆದು ಐದು ತಿಂಗಳು ಕಳೆದದರೂ ಈವರೆಗೆ ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿಲ್ಲ. ಇದು ರೈತರ ಸಂಕಷ್ಟಕ್ಕೆ ಕಾರಣವಾಗಿದೆ.

ಚುನಾವಣೆಯ ಮತದಾನದ ಹಕ್ಕಿಗೆ ಸಂಬಂಧಿಸಿದ ತಕರಾರು ಅರ್ಜಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ರೈತರ ಜೀವನಾಡಿಯಾಗಿದ್ದ ಟಿಎಂಎಸ್ನ ದೈನಂದಿನ ಆಡಳಿತ ಸದ್ಯ ಆಡಳಿತಾಧಿಕಾರಿಗಳ ಕೈಯಲ್ಲಿದೆ.

‘ಟಿಎಂಎಸ್ನಲ್ಲಿ ಜನಪ್ರತಿನಿಧಿಗಳ ಆಡಳಿತ ಇಲ್ಲದೇ ರೈತರಿಗೆ ತೊಂದರೆ ಆಗುತ್ತಿದೆ. ಮಾಧ್ಯಮಿಕ ಸಾಲ ಮತ್ತು ಬೆಳೆಸಾಲ ತುಂಬುವ ಈ ಸಮಯದಲ್ಲಿ ರೈತರಿಗೆ ಹೆಚ್ಚಿನ ಆರ್ಥಿಕ ನೆರವಿನ ಅಗತ್ಯ ಇದೆ. ಆದರೆ ಆಡಳಿತ ಸಮಿತಿ ಇಲ್ಲದ್ದರಿಂದ ರೈತರ ಪತ್ತು ನಿರ್ಧಾರವಾಗುತ್ತಿಲ್ಲ. ಇದರಿಂದಾಗಿ 2-3 ಸಾವಿರ ಕುಟುಂಬದ ವ್ಯವಹಾರ ತೊಂದರೆಗೆ ಸಿಲುಕಿದೆ. ಅನೇಕ ಬಡವರು ಸಾಲ ತುಂಬಲು ಖಾಸಗಿ ಬಂಡವಾಳದಾರರನ್ನು ಆಶ್ರಯಿಸುವುದು ಅನಿವಾರ್ಯವಾಗಿದೆ. ಈ ಹಿಂದಿನ ಅವಧಿಯಲ್ಲಿ ಟಿಎಂಎಸ್ ಒಂದಿಷ್ಟು ಹಣವನ್ನು ಹೊರಗಿನಿಂದ ಮುಂಗಡ ತಂದು ರೈತರಿಗೆ ನೆರವು ನೀಡಿ ಅವರು ಕಟ್ಟಬಾಕಿ ಸಾಲಗಾರರಾಗುವುದನ್ನು ತಪ್ಪಿಸಿದೆ’ ಎನ್ನುತ್ತಾರೆ ಹಿರಿಯ ಸಹಕಾರ ಪ್ರಮೋದ ಹೆಗಡೆ.

‘ರೈತರು ತಮ್ಮ ಫಸಲನ್ನು ಟಿಎಂಎಸ್ ಮೂಲಕ ವಹಿವಾಟು ಮಾಡುವುದು, ಅಗತ್ಯವಿದ್ದಾಗ ಹಣ ಪಡೆಯುವುದು, ಮದುವೆ ಮುಂತಾದ ಮಂಗಲ ಕಾರ್ಯಗಳು, ಮಕ್ಕಳ ವಿದ್ಯಾಭ್ಯಾಸ ಇತ್ಯಾದಿ ವಿಶೇಷ ಸಂದರ್ಭದಲ್ಲಿ ಫಸಲಿನ (ಪತ್ತು) ಆಧಾರದ ಮೇಲೆ ಹೆಚ್ಚುವರಿ ಹಣ ಪಡೆದು ನಂತರ ಬೆಳೆ ಬಂದಾಗ ವಿಕ್ರಿ ಮಾಡುವ ಮೂಲಕ ಸಾಲ ತೀರುವಳಿ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಆದರೆ ಈಗ ಆಡಳಿತ ಸಮಿತಿ ಅಸ್ತಿತ್ವದಲ್ಲಿ ಇರದ ಪರಿಣಾಮ ಹೊಸದಾಗಿ ಪತ್ತು ನಿರ್ಧಾರ ಆಗುತ್ತಿಲ್ಲ’ ಎನ್ನುತ್ತಾರೆ ರವಿ ಭಟ್ಟ.

‘ಖಾಸಗಿ ಅಡಿಕೆ ಮಂಡಿಗಳ ಕಪಿಮುಷ್ಠಿಯಲ್ಲಿ ಸಿಲುಕಿ ಈ ಹಿಂದೆ ತಾಲ್ಲೂಕಿನ ಅಡಿಕೆ ಬೆಳೆಗಾರರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಸಹಕಾರ ಸಂಘಗಳು ಮಾತ್ರ ರೈತನಿಗೆ ಆಸರೆ ನೀಡಬಲ್ಲವು. ಟಿಎಂಎಸ್ನ ಇಂದಿನ ಪರಿಸ್ಥಿತಿ ರೈತರ ಬೇಸರಕ್ಕೆ ಕಾರಣವಾಗಿದೆ’ ಎನ್ನುತ್ತಾರೆ ರಾಘವೇಂದ್ರ ಕುಂಬ್ರಿ.

ಪ್ರತಿಷ್ಠೆಯ ಪೈಪೋಟಿಯಿಂದ ಸಮಸ್ಯೆ

ಶಾಸಕ ಶಿವರಾಮ ಹೆಬ್ಬಾರ ಮತ್ತು ಹಿರಿಯ ಸಹಕಾರಿ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಅವರ ನಡುವಿನ ಪೈಪೋಟಿಯ ಪರಿಣಾಮ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರಲು ವಿಳಂಬವಾಗಿದೆ ಎಂಬುದು ರೈತರ ದೂರು. ‘ಸಂಸ್ಥೆಯ ಆಡಳಿತ ಮಂಡಳಿಯನ್ನು ತಮ್ಮ ಬಣದ ಹಿಡಿತಕ್ಕೆ ಪಡೆಯಲು ಇಬ್ಬರೂ ಪೈಪೋಟಿ ನಡೆಸಿದ್ದರು. ಪೈಪೋಟಿ ತೀವೃವಾಗುತ್ತಿದ್ದಂತೆ ಮತದ ಹಕ್ಕಿನ ವಿಚಾರ ಮುಂದಿಟ್ಟು ಕೋರ್ಟ್ ಮೊರೆ ಹೋಗಲಾಗಿದೆ. ಆಡಳಿತಾಧಿಕಾರಿ ರೈತಪರ ನಿರ್ಧಾರ ಕೈಗೊಳ್ಳಲು ಕಷ್ಟವಾಗುತ್ತಿದ್ದು ರೈತರಿಗೆ ಸಮಸ್ಯೆಯಾಗಿದೆ’ ಎನ್ನುತ್ತಾರೆ ಸಹಕಾರ ಸಂಘಗಳ ಪ್ರಮುಖರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.