ಯಲ್ಲಾಪುರ: ‘ಒಂದು ತಂಡವಾಗಿ ಕೆಲಸ ಮಾಡಿದಾಗ ಸಂಘಟನೆಗೆ ಶಕ್ತಿ ಬರಲಿದೆ. ನಾವು ಗುಣವಂತರಾಗಬೇಕು, ಶೀಲವಂತರಾಗಬೇಕು ಆ ಮೂಲಕ ಸಂಘಟನೆಗೆ ಬಲ ತುಂಬಬೇಕು’ ಎಂದು ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಪ್ರಾಂತ ಉಪಾಧ್ಯಕ್ಷ ಗಂಗಾಧರ ಹೆಗಡೆ ಹೇಳಿದರು.

ಪಟ್ಟಣದ ವಿಶ್ವದರ್ಶನ ಆವರಣದಲ್ಲಿ ಶನಿವಾರ ನಡೆದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕರ್ನಾಟಕ ಪ್ರಾಂತ ಶೌರ್ಯ ಪ್ರಶಿಕ್ಷಣ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮೆಲ್ಲರಲ್ಲೂ ಶಕ್ತಿ ಇದೆ, ಅದಕ್ಕೆ ಪರಿಪೂರ್ಣ ರೂಪ ನೀಡಬೇಕಾಗಿದೆ. ರಾಷ್ಟ್ರದ ಕೆಲಸ ಮಾಡಲು ಸಾಕಷ್ಟು ಸವಾಲುಗಳಿವೆ, ಅದನ್ನು ಎದುರಿಸಲು ಶಿಸ್ತು ಬದ್ಧ ಮಾರ್ಗದರ್ಶನದ ಅಗತ್ಯ. ಅಂತಹ ಮಾರ್ಗದರ್ಶನ ಶಿಬಿರದಲ್ಲಿ ಲಭಿಸಲಿದೆ’ ಎಂದರು.

ಕ್ಷೇತ್ರೀಯ ಧರ್ಮ ಪ್ರಸಾರ ಪ್ರಮುಖ ಸೂರ್ಯನಾರಾಯಣ ಮಾತನಾಡಿ, ‘ಇತಿಹಾಸವನ್ನು ಮುಂದಿನ ಸಮಾಜಕ್ಕೆ ದಾಟಿಸಲು ಸಮಾಜ ಸಂಘಟನೆ ಬಲಗೊಳ್ಳಬೇಕಿದೆ. ಹಿಂದೂಗಳಿಗೆ ಇರುವ ಒಂದೇ ದೇಶ ಭಾರತ. ಅದನ್ನು ಭಾರತವಾಗಿ ಉಳಿಸಿಕೊಳ್ಳಬೇಕಿದೆ. ನಿಸ್ವಾರ್ಥವಾಗಿ ದೇಶ ಸೇವೆ ಮಾಡಬೇಕು. ಇದಕ್ಕಾಗಿ ಯುವಕರು ಬಲಗೊಳ್ಳಬೇಕು’ ಎಂದರು.

ಜಿಲ್ಲಾ ಪ್ರಚಾರಕ ಗಣೇಶ ಮಾತನಾಡಿ, ‘ಶಿಕ್ಷಣದಿಂದ ಉತ್ತಮ ಸಂಸ್ಕಾರ ಗಳಿಕೆಯೊಂದಿಗೆ ನಮ್ಮ ವ್ಯಕ್ತಿತ್ವ ನಿರ್ಮಾಣವಾಗಬೇಕು. ನಾವು ಕಲಿತ ಸಂಸ್ಕಾರ ನಮ್ಮ ಜೀವನವನ್ನು ಸುಗಮದಾರಿಗೆ ಕರೆದೊಯ್ಯುತ್ತದೆ’ ಎಂದರು.

ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎನ್. ಭಟ್ಟ ಏಕಾನ, ಪ್ರಾಂತ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ ಸೂರ್ಯ, ಭಜರಂಗದಳದ ಪ್ರಾಂತ ಸಂಯೋಜಕ ಬಸವರಾಜ ಸೂಗೂರ, ಪ್ರಾಂತ ಸಹಕಾರ್ಯದರ್ಶಿ ಪುಂಡಲೀಕ ದಳವಾಯಿ, ಪ್ರಮುಖರಾದ ಶಿವಾನಂದ ಸತ್ತಿಗೇರಿ, ಮಲ್ಲಿಕಾರ್ಜುನ ಸತ್ತಿಗೇರಿ ಇದ್ದರು.

ಚಿದಾನಂದ ವೈಯಕ್ತಿಕ ಗೀತೆ ಹಾಡಿದರು. ಮಲ್ಲಿಕಾರ್ಜುನ ಎಚ್. ನಿರೂಪಿಸಿದರು. ಕರ್ನಾಟಕ ಉತ್ತರ ಪ್ರಾಂತದ 18 ಜಿಲ್ಲೆಗಳಿಂದ ಆಗಮಿಸಿದ 150ಕ್ಕೂ ಅಧಿಕ ಪ್ರಶಿಕ್ಷಣಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-20-1929678100

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.