ಯಲ್ಲಾಪುರ: ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಬುಧವಾರ ನಡೆದ ಪಶ್ಚಿಮ ಘಟ್ಟ ಕುರಿತ ಅಧ್ಯಯನ ಸಂಶೋಧನಾ ಕಾಯಾ೯ಗಾರ ಈ ಕೆಳಗಿನ ನಿರ್ಣಯ ಅಂಗೀಕರಿಸಿದೆ.

l ಜಗತ್ತಿನಲ್ಲಿಯೇ ಅತಿ ಅಪರೂಪದ ಜೀವವೈವಿಧ್ಯ ಹೊಂದಿರುವ ಪಶ್ಚಿಮ ಘಟ್ಟದ ಅಧ್ಯಯನ ಹಾಗೂ ಸಂರಕ್ಷಣೆಗೆ ಸಕಾ೯ರ ಇನ್ನಷ್ಟು ಹೆಚ್ಚಿನ ಆದ್ಯತೆ ನೀಡಬೇಕು.

l ಸಹ್ಯಾದ್ರಿಯ ನದಿ ಕಣಿವೆಗಳ ಸಂರಕ್ಷಣೆ ಕುರಿತು ವಿಜ್ಞಾನ ಸಂಸ್ಥೆಗಳು, ವಿಶ್ವ ವಿದ್ಯಾಲಯಗಳು ನೀಡಿದ ಅಧ್ಯಯನ ವರದಿಗಳ ಶಿಫಾರಸುಗಳನ್ನು ಜಾರಿಮಾಡಲು ಸಕಾ೯ರಗಳು ಮುಂದಾಗಬೇಕು.

l ಕನಾ೯ಟಕ ಪಶ್ಚಿಮ ಘಟ್ಟದ ಪರಿಸರ ಧಾರಣ ಸಾಮಥ್ಯ೯ ಅಧ್ಯಯನಕ್ಕೆ ರಾಜ್ಯ ಸಕಾ೯ರ ಆದೇಶ ಮಾಡಬೇಕು.

l ಹವಾಮಾನ ಬದಲಾವಣೆ ಕಾರಣದಿಂದ ಕೃಷಿ, ತೋಟಗಾರಿಕೆ ಅರಣ್ಯದ ಮೇಲೆ ಆಗಿರುವ ಪರಿಣಾಮಗಳ ಕುರಿತ ಅಧ್ಯಯನ ವರದಿಗಳ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು.

l ಸಂಶೋಧನಾ ಸಂಸ್ಥೆ, ವಿಶ್ವವಿದ್ಯಾಲಯಗಳ ಅಧ್ಯಯನಗಳ ಮುಖ್ಯಾಂಶ, ಶಿಫಾರಸು ಕನ್ನಡದಲ್ಲಿ ಲಭ್ಯವಾಗಬೇಕು. ಹಾಗೂ ಈ ಮಾಹಿತಿಗಳನ್ನು ಪಂಚಾಯತ ಜೀವವೈವಿಧ್ಯ ಸಮಿತಿಗಳ ಮೂಲಕ ಹಳ್ಳಿಗಳಿಗೆ ತಲುಪಿಸುವ ಕ್ರಮ ಜರುಗಬೇಕು.

l ಜೌಗು ಭೂಮಿ ಸಂರಕ್ಷಣಾ ಪ್ರಾಧಿಕಾರ, ಅರಣ್ಯ ಇಲಾಖೆಯ ಸಂಶೋಧನಾ ವಿಭಾಗ, ಜೌಶಧಿ ಮೂಲಿಕಾ ಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿ ಇವುಗಳ ಸಮನ್ವಯ ಸಮಿತಿ ರಚಿಸಿ ಅಧ್ಯಯನಗಳು ವ್ಯವಸ್ಥಿತವಾಗಿ- ಸಮಗ್ರವಾಗಿ ನಡೆಯಲು ಜೀವ ವೈವಿಧ್ಯ ಮಂಡಳಿ ಸಂಯೋಜನೆ ಮಾಡಬೇಕು. ಈ ಬಗ್ಗೆ ಅರಣ್ಯ -ಪರಿಸರ ಸಚಿವರು ಆದೇಶ ನೀಡಬೇಕು.

l 2021ರಲ್ಲಿ ಸಲ್ಲಿಸಿದ ಭೂ ಕುಸಿತ ಅಧ್ಯಯನ ವರದಿ ಶಿಫಾರಸುಗಳ ತ್ವರಿತ ಜಾರಿ ಆಗಬೇಕು.

l ಜೀವವೈವಿಧ್ಯ ಮಂಡಳಿ ನೇತೃತ್ವದಲ್ಲಿ ಪರಿಸರ, ಅರಣ್ಯ, ಜೀವವೈವಿಧ್ಯ ತಜ್ಞರು ಮತ್ತು ಸಂಸ್ಥೆಗಳ ನಿಯೋಗ ರಾಜ್ಯದ ಮುಖ್ಯಮಂತ್ರಿ -ಅರಣ್ಯ ಸಚಿವರನ್ನು ಭೇಟಿ ಮಾಡಿ ಸಹ್ಯಾದ್ರಿಯ ಜೀವ ವೈವಿಧ್ಯ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಬಗ್ಗೆ ಮಹತ್ವದ ಸಮಾಲೋಚನೆ ನಡೆಸಬೇಕು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-20-572516000

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.