ಯಲ್ಲಾಪುರ: ‘ಪಟ್ಟಣದ ಕಾರ್ಮಿಕ ಭವನದಲ್ಲಿ ಮೇ 23 ಹಾಗೂ 24ರಂದು ಪ್ರತಿಬಿಂಬ ಹಾಗೂ ಸಂಸ್ಕಾರೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಹವ್ಯಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಡಿ. ಶಂಕರ ಭಟ್ಟ ತಿಳಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘23ರಂದು ಹವ್ಯಕ ಸಮಾಜದ 6 ವರ್ಷದೊಳಗಿನ ಮಕ್ಕಳಿಗೆ ಶ್ಲೋಕ ಪಠಣ, ಛದ್ಮವೇಷ, ಬಣ್ಣ ತುಂಬುವುದು; 7ರಿಂದ 12 ವರ್ಷದೊಳಗಿನವರಿಗೆ ಭಗವದ್ಗೀತಾ ಕಂಠಪಾಠ, ಚಿತ್ರಕಲೆ, ಏಕಪಾತ್ರಾಭಿನಯ; 12ರಿಂದ 18 ವರ್ಷದವರಿಗೆ ರಸಪ್ರಶ್ನೆ, ಆಶುಭಾಷಣ, ಚರ್ಚಾ ಸ್ಪರ್ಧೆ, ದೇಶ ಭಕ್ತಿಗೀತೆ ಹಾಗೂ 18 ವರ್ಷ ಮೇಲ್ಪಟ್ಟವರಿಗೆ ಹವ್ಯಕ ಸಂಪ್ರದಾಯ ಗೀತೆ, ಚುಕ್ಕಿ ರಂಗೋಲಿ, ಜಾನಪದ ಗೀತೆ, ಹವಿಗನ್ನಡ ಆಶುಭಾಷಣ, ಹವಿರುಚಿ ಹಾಗೂ ಮಿಮಿಕ್ರಿ ಸ್ಪರ್ಧೆ ನಡೆಯಲಿದೆ’ ಎಂದರು.

ಹವ್ಯಕ ಮಹಾಸಭೆಯ ನಿರ್ದೇಶಕ ಪ್ರಶಾಂತ ಹೆಗಡೆ ಮಾತನಾಡಿ, ‘24ರಂದು ಹಮ್ಮಿಕೊಂಡಿರುವ ಸಂಸ್ಕಾರೋತ್ಸವವನ್ನು ಮಾಜಿ ಸಂಸದ ಅನಂತಕುಮಾರ ಹೆಗಡೆ ಉದ್ಘಾಟಿಸುವರು. ಜಿ.ಎಸ್. ನಟೇಶಉಪನ್ಯಾಸ ನೀಡುವರು’ ಎಂದರು.

‘ರಾಮಕೃಷ್ಣ ಹೆಗಡೆ ಹಿಲ್ಲೂರು, ನರಸಿಂಹ ಭಟ್ಟ ಹಂಡ್ರಮನೆ, ಗಣೇಶ ಗಾಂವ್ಕರ ಹಳವಳ್ಳಿ, ವಿನಯ ಭಟ್ಟ ಬೇರೊಳ್ಳಿ, ಅಶ್ವಿನಿ ಕೊಂಡದಕುಳಿ ಅವರಿಂದ ಗಾನ–ನಾಟ್ಯ ವೈಭವ ಹಾಗೂ ಜಾನಪದ ನೃತ್ಯ ಕಾರ್ಯಕ್ರಮ ಜರುಗಲಿದೆ. ವಿ. ಉಮಾಕಾಂತ ಭಟ್ಟ ಕೆರೆಕೈ ಅವರ ಅಧ್ಯಕ್ಷತೆಯಲ್ಲಿ ವಿದ್ವತ್ ಗೋಷ್ಠಿ ಆಯೋಜಿಸಲಾಗಿದ್ದು ಚಿಂತಕ ರೋಹಿತ್ ಚಕ್ರತೀರ್ಥ ಉಪನ್ಯಾಸ ನೀಡಲಿದ್ದಾರೆ. ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ರಾತ್ರಿ ತಾಳಮದ್ದಳೆ ನಡೆಯಲಿದೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಮಂತ್ರಣ ಬಿಡುಗಡೆಗೊಳಿಸಲಾಯಿತು. ಅನಂತ ಗಾಂವ್ಕರ, ಸಣ್ಣಪ್ಪ ಭಾಗ್ವತ, ರಾಜಾರಾಮ ಹೆಗಡೆ, ಕೆ.ಆರ್. ಕೃಷ್ಣಮೂರ್ತಿ, ಶಾಂತಾರಾಮ ಹೆಗಡೆ ಕೊಂಡದಕುಳಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-20-1117062963

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.