ಯಲ್ಲಾಪುರ: ಕಳೆದ 18 ವಷ೯ಗಳಿಂದ ಅರಣ್ಯದಲ್ಲಿ ವಾಸಿಸಿ, ಜಮೀನು ಸಾಗುವಳಿ ಮಾಡಿಕೊಂಡು ಬರುತ್ತಿರುವ ನಮಗೆ ಹಕ್ಕುಪತ್ರ ನೀಡಲಾಗಿದೆಯಾದರೂ ಆರ್ಟಿಸಿ ಹೊಂದಿರುವ ರೈತರಿಗೆ ಕೊಡಮಾಡುವ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ ಎಂದು ಕನಾ೯ಟಕ ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘದ ರಾಜ್ಯಾಧ್ಯಕ್ಷ ಬೆನಿತ್ ಅಂತೋನಿ ಸಿದ್ದಿ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಗುವಳಿ ಮಾಡಿದ ಜಮೀನಿನ ಪ್ರಮಾಣಕ್ಕೂ ಜಿಪಿಎಸ್ ನಲ್ಲಿ ತೋರಿಸಲಾದ ಜಮೀನಿನ ಪ್ರಮಾಣಕ್ಕೂ ವ್ಯತ್ಯಾಸ ಇದೆ. ಈ ವ್ಯತ್ಯಾಸವನ್ನು ಸರಿಪಡಿಸಿ ಆರ್ಟಿಸಿ ಮಾಡಿಕೊಡುವಂತೆ ಸರಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದೇವೆ. ಆದರೆ ಇದುವರೆಗೂ ಯಾವುದೇ ಕ್ರಮ ಆಗಿಲ್ಲ ಎಂದು ಅವರು ಆರೋಪಿಸಿದರು.

ಆರ್ಟಿಸಿ ನೀಡದ ಕಾರಣ ರೈತರಿಗೆ ಸಿಗಬೇಕಾದ ಬೆಳೆಸಾಲ, ಮಾಧ್ಯಮಿಕ ಸಾಲ ಮುಂತಾದ ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಈ ನಿಟ್ಟಿನಲ್ಲಿ ಸರಕಾರ ಆದಷ್ಟು ಶೀಘ್ರ ಕ್ರಮ ಕೈಗೊಳ್ಳಬೇಕು. ಕಾನೂನಿನಲ್ಲಿ ಅವಕಾಶ ಇರುವಂತೆ ನಾವು ಸಾಗುವಳಿ ಮಾಡಿದ ಎಲ್ಲ ಜಮೀನಿನ ಜಿಪಿಎಸ್ ಮಾಡಿ ಆರ್ಟಿಸಿ ನೀಡಬೇಕು ಎಂದರು.

ಕನಾ೯ಟಕ ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘದ ಕಾಯಾ೯ಧ್ಯಕ್ಷ ಲಾರೆನ್ಸ್ ಕೈತಾನ ಸಿದ್ದಿ ಮಾತನಾಡಿ, ಸಕಾ೯ರಿ ಉದ್ಯೋಗದಲ್ಲಿ ಪರಿಶಿಷ್ಟರಿಗೆ ಮೀಸಲಾತಿ ಕಲ್ಪಿಸಲಾಗಿದ್ದರೂ ಅದು ಸಿದ್ದಿ ಸಮುದಾಯದವರಿಗೆ ಸಿಗುತ್ತಿಲ್ಲ. ಕಾರಣ ಸಿದ್ದಿ ಸಮುದಾಯದವರಿಗೆ ಪ್ರತ್ಯೇಕ ಒಳ ಮೀಸಲಾತಿ ಕಲ್ಪಿಸಬೇಕು ಎಂದರು.

ಕನಾ೯ಟಕ ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘದ ಗೌರವಾಧ್ಯಕ್ಷ ಜಾನ್ ಕೊಸ್ತಾಂವ್ ಬಿಳ್ಕಿಕರ, ಪ್ರಮುಖರಾದ ಅಗಸ್ತಿನ್ ಜುಜೆ ಸಿದ್ದಿ, ಶಂಕರ ನಾರಾಯಣ ಸಿದ್ದಿ, ಬಸ್ತ್ಯಾಂ ಪ್ರಾಸ್ಸಿಸ್ ಸಿದ್ದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-20-1141398995

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.