ಯಲ್ಲಾಪುರ: ‘ಗ್ರಾಮೀಣ ಜನರ ಬದುಕು ರೂಪಾಂತರಕ್ಕೆ ಒಳಗಾಗುತ್ತಿದೆ. ರೂಪಾಂತರವಿಲ್ಲದೇ ವಿಕಾಸ ಇಲ್ಲ. ಹಾಗಾಗಿ ಈ ರೂಪಾಂತರವನ್ನು ಸ್ವೀಕರಿಸಿ ನಾವು ಬದಲಾದ ಕಾಲಘಟ್ಟಕ್ಕೆ ಹೊಂದಾಣಿಕೆ ಮಾಡಿಕೊಳ್ಳಬೇಕಾದದ್ದು ಅಗತ್ಯ’ ಎಂದು ಕತೆಗಾರ ಶ್ರೀಧರ ಬಳಗಾರ ಅಭಿಪ್ರಾಯಪಟ್ಟರು.

ಬೀಗಾರಿನ ಕಲ್ಮನೆ ಆವಾರದಲ್ಲಿ ಭಾನುವಾರ ನಡೆದ ಮನೆಯಂಗಳದಲ್ಲಿ ಸಾಹಿತ್ಯ ಚಿಂತನ ಕಾರ್ಯಕ್ರಮದ ಮೂರನೇ ಆವೃತ್ತಿ ಉದ್ಘಾಟಿಸಿ ಮಾತನಾಡಿದರು.

‘ಇಂದಿನ ಸಂಪರ್ಕ ಯುಗ ಮನುಷ್ಯ ಮನುಷ್ಯನ ನಡುವಿನ ಸಂಬಂಧಗಳನ್ನು ಕ್ಷೀಣಿಸುತ್ತಿದೆ. ಸಾಹಿತ್ಯದಲ್ಲಿ ಅಂತಿಮವಾಗಿ ಮುಖ್ಯವಾದದ್ದು ಸಂಬಂಧ. ಹಾಗಾಗಿ ಸಂಬಂಧ ಬೆಳೆಯುವಂತಹ ಕಾರ್ಯಕ್ರಮವೂ ಅಷ್ಷೇ ಮುಖ್ಯ. ಹುಟ್ಟು, ಮದುವೆ, ಸಾವು ಈ ಮೂರು ಸಂಗತಿಗಳ ಜೀವಂತ ಅನುಭವ ಈ ತಲೆಮಾರಿನ ಜನರಿಗೆ ಆಗುತ್ತಿಲ್ಲ. ಬದುಕಿನಲ್ಲಿ ಪರಸ್ಪರ ಅವಲಂಬನೆ ಕಡಿಮೆಯಾಗುತ್ತಿದೆ. ಸಹಜ ಜೀವನಕ್ರಮ ತಪ್ಪುತ್ತಿದೆ’ ಎಂದರು.

ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ‘ಕಲೆ, ಸಾಹಿತ್ಯ, ಸಂಗೀತ ಇವೆಲ್ಲ ದೇಶದ ಆಧಾರ ಸ್ತಂಭಗಳು. ಇವುಗಳ ಕುರಿತು ಶ್ರದ್ಧೆ ಅಗತ್ಯ. ಇಂದು ಸರಿಯಾಗಿ ಅರಿತುಕೊಳ್ಳದೇ ಎಲ್ಲವನ್ನೂ ಟೀಕಿಸುವ ಮನೋಧರ್ಮ ಬೆಳೆಯುತ್ತಿದೆ’ ಎಂದು ಬೇಸರಿಸಿದರು.

ಪ್ರಮುಖರಾದ ದತ್ತಾತ್ರೇಯ ಭಟ್ಟ ಕಣ್ಣಿಪಾಲ, ಗಣಪತಿ ಮೆಣಸುಮನೆ, ನಾರಾಯಣ ಹೆಗಡೆ ಅವರು ಹರಿಪ್ರಕಾಶ ಕೋಣೆಮನೆಯವರ ಕೃತಿಯನ್ನು ಅವಲೋಕಿಸಿದರು.

ತಾಳಮದ್ದಲೆ ಅರ್ಥದಾರಿ ಎಂ.ಎನ್.ಹೆಗಡೆ ಹಳವಳ್ಳಿ ಅಧ್ಯಕ್ಷತೆ ವಹಿಸಿ, ‘ಸಾಹಿತ್ಯಕ್ಕೆ ಓದುಗರು ಇಲ್ಲ ಎನ್ನುವ ಆಕ್ಷೇಪ ಸರಿಯಲ್ಲ. ಓದುವ ವಿಧಾನ ಬದಲಾಗಿದೆ. ಬರೆಯುವವರು ಭಾಷೆಯ ಕುರಿತು ಅಪಾರ ಎಚ್ಚರ ವಹಿಸಬೇಕು. ಇಲ್ಲದಿದ್ದರೆ ಸಾಹಿತ್ಯದ ವಿಕೃತಿ ಆಗುತ್ತದೆ’ ಎಂದರು.

ಹಿರಿಯ ಸಹಕಾರಿ ಎಸ್.ಎನ್.ಗಾಂವ್ಕರ, ಪ್ರಮುಖರಾದ ಗಣಪತಿ ಮಾನಿಗದ್ದೆ ಇದ್ದರು.

ನಿವೃತ್ತ ಪ್ರಾಚಾರ್ಯ ಜಿ.ಕೆ.ಗಾಂವ್ಕರ ಪ್ರಾಸ್ತಾವಿಕವಾಗಿ ಮಾತನಾಡಿ, ‘ಭೂಮಿಯನ್ನು ನಿರ್ಲಕ್ಷಿಸಿ ಯಾವುದೇ ಕೆಲಸ ಮಾಡುವುದು ಸರಿಯಾದ ಕ್ರಮವಲ್ಲ. ಕೃಷಿ ಭೂಮಿಯನ್ನು ಉತ್ತಮವಾಗಿ ಪೋಷಿಸುವ ಜೊತೆ ಜೊತೆಗೆ ಉಳಿದ ಕೆಲಸ ಮಾಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.