‘ವಾಜಪೇಯಿ ಆದರ್ಶ ಅಳವಡಿಸಿಕೊಳ್ಳಿ’

7

‘ವಾಜಪೇಯಿ ಆದರ್ಶ ಅಳವಡಿಸಿಕೊಳ್ಳಿ’

Published:
Updated:
Deccan Herald

ಮಾಗಡಿ: ‘ದೇಶ ಕಂಡ ಅಪರೂಪದ ರಾಜನೀತಿಜ್ಞ, ಅಪ್ಪಟ ದೇಶಭಕ್ತ ಅಟಲ ಬಿಹಾರಿ ವಾಜಪೇಯಿ ನಿಧನದಿಂದಾಗಿ ಅಪಾರ ನಷ್ಟವಾಗಿದೆ’ ಎಂದು ಬಿಜೆಪಿ ಮುಖಂಡ ಶಶಿಧರ್‌ ತಿಳಿಸಿದರು.

ಸೋಮೇಶ್ವರ ಬಡಾವಣೆಯಲ್ಲಿ ಗುರುವಾರ ಅಗಲಿದ ವಾಜಪೇಯಿ ಅವರಿಗೆ ಸಂತಾಪ ಸೂಚಕ ಸಭೆಯಲ್ಲಿ ಅವರು ಮಾತನಾಡಿದರು.

‘ಲಾಲ್‌ ಬಹದ್ದೂರ್‌ ಶಾಸ್ತ್ರಿ ಆವರ ನಂತರ ಭಾರತೀಯರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವ ದೇಶಭಕ್ತರಲ್ಲಿ ವಾಜಪೇಯಿ ಪ್ರಮುಖರು. ಅವರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳುವ ಅಗತ್ಯವಿದೆ’ ಎಂದು ಅವರು ಕಂಬನಿ ಮಿಡಿದರು.

ಬಿಜೆಪಿ ಮುಖಂಡರಾದ ಮಾರಪ್ಪ ದೊಂಬಿದಾಸ, ಗೋಪಾಲ್‌, ಶಂಕರ್‌, ನರಸಿಂಹಣ್ಣ ಅವರು ವಾಜಪೇಯಿ ವ್ಯಕ್ತಿತ್ವದ ಕುರಿತು ಮಾತನಾಡಿದರು.

ಬಿಸ್ಕೂರಿನಲ್ಲಿ ಮುಖಂಡರಾದ ಬಿ.ಎಸ್‌.ಸುಹೇಲ್‌, ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಮ್ಮ ಗಿರಿಯಪ್ಪ ಸಂತಾಪ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !