ನನಸಾಗದ ನದಿ ಜೋಡಣೆ ಕನಸು

7
ಅಟಲ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಭೆ

ನನಸಾಗದ ನದಿ ಜೋಡಣೆ ಕನಸು

Published:
Updated:
Deccan Herald

ಮಾಗಡಿ: ಕವಿ ಹೃದಯಿ ಅಟಲ್‌ ಬಿಹಾರಿ ವಾಜಪೇಯಿ ಅವರ ಬದುಕು ಎಲ್ಲರಿಗೂ ಆದರ್ಶ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿರುಮಲೆ ಸಿ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ತಾಲ್ಲೂಕು ಬಿಜೆಪಿ ವತಿಯಿಂದ ಶುಕ್ರವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಆಡಳಿತದಲ್ಲಿ ನಿಷ್ಠುರತೆ, ಮಾನವ ಪ್ರೀತಿ ಬೆಸೆಯುವಲ್ಲಿ ಮೇರು ಪರ್ವತವಾಗಿದ್ದರು. ಲಾಹೋರ್‌ ಬಸ್‌ ಯಾತ್ರೆ, ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ರಾಷ್ಟ್ರೀಯ ಹೆದ್ದಾರಿ ಜೋಡಣೆ, ಪೋಖ್ರಾನ್‌ನಲ್ಲಿ ಅಣುಸ್ಫೋಟ ಅವರ ಉತ್ಕಟ ದೇಶಪ್ರೇಮಕ್ಕೆ ಸಾಕ್ಷಿಯಾಗಿದೆ. ಗಂಗಾ – ಕಾವೇರಿ ನದಿಗಳ ಜೋಡಣೆ ಮಾತ್ರ ಕನಸಾಗಿಯೇ ಉಳಿದಿದೆ. ಸ್ವಯಂ ಶಿಸ್ತು, ಶ್ರದ್ಧೆಯಲ್ಲಿ ಅವರನ್ನು ಮೀರಿಸುವವರು ಮತ್ತೊಬ್ಬರಿಲ್ಲ ಎಂದರು.

ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಡಾ.ರಂಗಧಾಮಯ್ಯ ಮಾತನಾಡಿ, ವಾಜಪೇಯಿ ಅವರು ಹಾಕಿಕೊಟ್ಟಿರುವ ದೇಶಭಕ್ತಿಯ ಜನತಂತ್ರಾತ್ಮಕ, ಧಾರ್ಮಿಕ, ರಾಷ್ಟ್ರೀಯವಾದ ಮುಂದುವರಿಸುವ ಮೂಲಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸೋಣ ಎಂದರು.

ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಎಂ.ಕೆ.ಮಾತನಾಡಿ, ದಮನಿತ ವರ್ಗಗಳನ್ನು ಮುಖ್ಯವಾಹಿನಿಗೆ ತಂದು ಅವರಲ್ಲಿ ನೈತಿಕ ಸ್ಥೈರ್ಯ ತುಂಬಿದ್ದರು. ರಾಷ್ಟ್ರ ಸೇವೆಗೆ ಯುವಕರನ್ನು ಅಣಿಗೊಳಿಸಿ ಅಮರರಾದರು ಎಂದು ಬಣ್ಣಿಸಿದರು.

ಬಿಜೆಪಿ ಜಿಲ್ಲಾ ಘಟಕದ ಒಬಿಸಿ ಉಪಾಧ್ಯಕ್ಷ ದಯಾನಂದ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ರಾಜಗೋಪಾಲ್‌, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಭಾಸ್ಕರ್‌, ಕಾರ್ಯದರ್ಶಿ ಬಾಲಾಜಿ, ತಾಲ್ಲೂಕು ಘಟಕದ ಮುಖಂಡರಾದ ಎಂ.ಟಿ.ಶಿವಣ್ಣ, ನಿಜಗುಣ ಶಿವಯೋಗಿ, ಕುದೂರು ಶೇಷಪ್ಪ, ಸೋಮೇಶ್ವರ ಬಡಾವಣೆ ಶಶಿಧರ್‌, ಒಬಿಸಿ ಮುಖಂಡ ಮಾರಪ್ಪ ದೊಂಬಿದಾಸರ್‌, ವಾಜಪೇಯಿ ಅವರ ಸಾಧನೆಗಳ ಕುರಿತು ಮಾತನಾಡಿದರು.

ಭೈರಣ್ಣ, ಕುದೂರಿನ ಕೆ.ವೆಂಕಟೇಶ್, ಎಲ್‌.ನಾರಾಯಣಪ್ಪ, ಕೃಷ್ಣಪ್ಪ, ಕುಮಾರ್‌, ಬಿಸ್ಕೂರಿನ ಬೊಮ್ಮಲಿಂಗಯ್ಯ, ಕಾರು ನರಸಿಂಹಣ್ಣ, ತಿರುಮಲೆ ಚಂದ್ರಕಾಂತ್‌, ಹಲಸಬೆಲೆ ಮಹದೇವಯ್ಯ, ಟೈರ್‌ ಅಂಗಡಿ ಬಾಬು ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !