ಸಜ್ಜನ ರಾಜಕಾರಣಿ ಕಳೆದುಕೊಂಡ ದೇಶ

7
ರಾಮನಗರದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ

ಸಜ್ಜನ ರಾಜಕಾರಣಿ ಕಳೆದುಕೊಂಡ ದೇಶ

Published:
Updated:
Deccan Herald

ರಾಮನಗರ : ಗುರುವಾರ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಇಲ್ಲಿನ ಐಜೂರು ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕವಿ ಹೃದಯದ ರಾಜಕರಣಿ, ಅಜಾತಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ದೇಶವನ್ನು ಅಗಲಿ ಬಾರದ ಲೋಕಕ್ಕೆ ಪ್ರಯಾಣಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್‌ ತಿಳಿಸಿದರು.

ಉತ್ತಮ ವಾಗ್ಮಿ, ಆಡಳಿತಗಾರ ವಾಜಪೇಯಿ ನಿಧನದಿಂದ ದೇಶ ಒಬ್ಬ ಸಜ್ಜನ ರಾಜಕಾರಣಿಯನ್ನು ಕಳೆದುಕೊಂಡಿದೆ. ಅವರದ್ದು ಮೇರು ವ್ಯಕ್ತಿತ್ವ. ಪ್ರಧಾನಿ ಹುದ್ದೆಗೆ ಗೌರವ ತಂದುಕೊಟ್ಟ ವ್ಯಕ್ತಿ. ಪಕ್ಷಾತೀತವಾಗಿ ರಾಜಕೀಯ ಮುಖಂಡರು ಅವರನ್ನು ಗೌರವಿಸುತ್ತಿದ್ದರು ಎಂದರು.

ಯಾರಾದರೂ ನಿಧನ ಹೊಂದಿದರೆ ಅವರು ತಮ್ಮ ಪತ್ನಿ, ಮಕ್ಕಳು, ಸಂಬಂýಧಿಕರು, ಸ್ನೇಹಿತರನ್ನು ಅಗಲಿದ್ದಾರೆ ಎನ್ನುತ್ತೇವೆ. ಆದರೆ ವಾಜಪೇಯಿ ಇಡಿ ದೇಶದ ಜನರನ್ನೇ ಆಗಲಿದ್ದಾರೆ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಸಹ ಇಂತಹ ಧೀಮಂತ ವ್ಯಕ್ತಿಯಾಗಿದ್ದರು. ಇವರ ಸಾವಿನಲ್ಲೂ ಇಡೀ ದೇಶ ಕಂಬನಿ ಮಿಡಿದಿತ್ತು ಎಂದರು.

ಅವರ ನಿಧನದಿಂದಾಗಿ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದರು.

ಐಜೂರು ವೃತ್ತದಲ್ಲಿ ಶ್ರದ್ಧಾಂಜಲಿಗೂ ಮುನ್ನ ಬಿಜೆಪಿ ಕಾರ್ಯಕರ್ತರು ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗ ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ನಂತರ ವಾಜಪೇಯಿ ಭಾವಚಿತ್ರದೊಂದಿಗೆ ನಗರದ ಎಂ.ಜಿ.ರಸ್ತೆ, ಮುಖ್ಯರಸ್ತೆ, ಹಳೆ ಬಸ್ ನಿಲ್ದಾಣ, ಮಾಗಡಿ ರಸ್ತೆ, ಕೆಂಪೇಗೌಡ ವೃತ್ತದ ಮೂಲಕ ಮೆರವಣಿಗೆ ನಡೆಸಿ ಐಜೂರು ವೃತ್ತದಲ್ಲಿ ಶ್ರದ್ಧಾಂಜಲಿ ಅರ್ಪಿಸಿದರು.

ಬಿಜೆಪಿ ಮುಖಂಡರಾದ ಎಸ್.ಆರ್. ನಾಗರಾಜು, ಶಿವಮಾದು, ಚಂದ್ರಶೇಖರ ರೆಡ್ಡಿ, ಜಿ.ವಿ. ಪದ್ಮನಾಭ, ಕುಮಾರ್‌ ಗೌಡ, ವಿನೋದ್, ಪ್ರವೀಣ್‌ಗೌಡ, ರುದ್ರದೇವರು, ಚಂದನ್‌ ಮೋರೆ, ಸುರೇಶ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !