ಮಂಗಳವಾರ, ಆಗಸ್ಟ್ 20, 2019
25 °C

ಪಶು ವೈದ್ಯರಿಂದ ಲಂಚಕ್ಕೆ ಬೇಡಿಕೆ?

Published:
Updated:

ಶಿವಮೊಗ್ಗ: ಪಶು ಆಹಾರ ಮಂಜೂರು ಮಾಡಲು ಪಶು ವೈದ್ಯಾಧಿಕಾರಿ ಲಂಚ ಕೇಳಿದ್ದಾರೆ ಎನ್ನಲಾದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಶಿಕಾರಿಪುರ ತಾಲ್ಲೂಕು ಸಾಲೂರು ವೈದ್ಯಾಧಿಕಾರಿ ಪಶು ಆಹಾರ ಮಂಜೂರಾತಿ ಪತ್ರಕ್ಕೆ ಸಹಿ ಮಾಡಲು ₨ 1,500 ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಷ್ಟು ಕೊಡಲು ಆಗುವುದಿಲ್ಲ ಎಂದು ವ್ಯಕ್ತಿಯೊಬ್ಬ ಚೌಕಾಸಿ ಮಾಡುತ್ತಿದ್ದಾನೆ. ಹಿಂದಿನ ಬಾಕಿ ₨ 650 ಹಾಗೆ ಇದೆ ಎಂದು ವೈದ್ಯರು ದಬಾಯಿಸುತ್ತಾರೆ. ಕೆಲವು ಮಹಿಳೆಯರು ಸಾಕು ಬಿಡಿ ಸಾರ್ ಎಂದು ಧ್ವನಿಗೂಡಿಸಿದ್ದಾರೆ.

ಈ ಸಂಭಾಷಣೆ ಲಂಚದ ಬೇಡಿಕೆಯೇ? ಆ ವ್ಯಕ್ತಿ ವೈದ್ಯರ ಬಳಿ ಹಣ ಪಡೆದು ಹಿಂದಿರುಗಿಸುವಾಗ ನಡೆದ ಮಾತುಕತೆಯೇ ಎನ್ನುವುದು ದೃಢಪಟ್ಟಿಲ್ಲ.

ಈ ಕುರಿತು ಪ್ರತಿಕ್ರಿಯೆ ನೀಡಿದ ಪಶು ವೈದ್ಯ ಕುಮಾರನಾಯ್ಕ, ಅದು ನನ್ನಿಂದ ಅವರು ಪಡೆದ ಹಣ ಹಿಂದಿರುಗಿಸಲು ನಡೆಸಿದ ಮಾತುಕತೆ ಎಂದು ಸಮರ್ಥಿಸಿಕೊಂಡಿದ್ದಾರೆ.

Post Comments (+)