ಘಟನಾ ಸ್ಥಳಕ್ಕೆ ಆರೋಪಿಗಳು; ಕಸ್ಟಡಿ ವಿಸ್ತರಣೆ

7
ಭೀಮಾ ತೀರದ ರೌಡಿ ಧರ್ಮರಾಜ ಚಡಚಣನ ಎನ್‌ಕೌಂಟರ್‌ ಪ್ರಕರಣದ ತನಿಖೆ

ಘಟನಾ ಸ್ಥಳಕ್ಕೆ ಆರೋಪಿಗಳು; ಕಸ್ಟಡಿ ವಿಸ್ತರಣೆ

Published:
Updated:

ವಿಜಯಪುರ: ಭೀಮಾ ತೀರದ ರೌಡಿ ಧರ್ಮರಾಜ ಚಡಚಣನ ಎನ್‌ಕೌಂಟರ್‌ ಪ್ರಕರಣದ ತನಿಖೆ ನಡೆಸುತ್ತಿರುವ ಜಿಲ್ಲಾ ಪೊಲೀಸರು ಶುಕ್ರವಾರ ಪ್ರಮುಖ ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸಿದರು.

ಧರ್ಮರಾಜನಿಗೆ ಗುಂಡಿಕ್ಕಿದ ಪಿಎಸ್‌ಐ ಗೋಪಾಲ ಹಳ್ಳೂರ, ಈತನಿಗೆ ಸಾಥ್‌ ನೀಡಿದ್ದ ಶಿವಾನಂದ ಬಿರಾದಾರ, ಭಾಷಾಸಾಬ್‌ ನದಾಫ್‌ ಹಾಗೂ ಭೀಮಾಶಂಕರ ಬಿರಾದಾರ ದೇವರ ನಿಂಬರಗಿ ಅವರನ್ನು ಎನ್‌ಕೌಂಟರ್‌ ನಡೆದ ಕೊಂಕಣಗಾಂವ್‌ಗೆ ಕರೆದೊಯ್ದು ಮಾಹಿತಿ ಪಡೆದರು.

ಪ್ರಕರಣದ ಸೂತ್ರಧಾರ, ಪ್ರಮುಖ ಆರೋಪಿ ಕಾಂಗ್ರೆಸ್‌ ಮುಖಂಡ ಮಹಾದೇವ ಭೈರಗೊಂಡನನ್ನು ಚಡಚಣ ಪೊಲೀಸ್‌ ಠಾಣೆಯಲ್ಲೇ ಇನ್ನಿತರ ಆರೋಪಿಗಳ ಜತೆ ವಿಜಯಪುರ ಡಿವೈಎಸ್‌ಪಿ ಡಿ.ಅಶೋಕ ತನಿಖೆಗೊಳಪಡಿಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಐವರು ಆರೋಪಿಗಳ ವಿಚಾರಣೆ ಬಳಿಕ ಇಂಡಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿ, ಇನ್ನೂ ಹೆಚ್ಚಿನ ವಿಚಾರಣೆಗಾಗಿ ಇದೇ 6ರವರೆಗೆ ನ್ಯಾಯಾಧೀಶರಿಂದ ಅನುಮತಿ ಪಡೆದು, ವಶಕ್ಕೆ ಪಡೆದರು ಎಂಬುದು ತಿಳಿದು ಬಂದಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !