ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಂಪಿ ಉತ್ಸವ’; ಆಹಾರ ಮೇಳಕ್ಕೆ ಅರ್ಜಿ ಆಹ್ವಾನ

Last Updated 16 ಜನವರಿ 2023, 14:12 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಜ. 27ರಿಂದ 29ರ ವರೆಗೆ ನಡೆಯಲಿರುವ ‘ಹಂಪಿ ಉತ್ಸವ’ದಲ್ಲಿ ಆಹಾರ ಮೇಳ ಆಯೋಜಿಸಲು ಅರ್ಹ ಹೋಟೆಲ್‌, ಆಹಾರ ತಯಾರಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಹಂಪಿಯ ಗಾಯಿತ್ರಿ ಪೀಠ ಹಾಗೂ ಪಾರ್ಕಿಂಗ್ ಪ್ರದೇಶದಲ್ಲಿ ಶೆಡ್‍ಗಳನ್ನು ನಿರ್ಮಿಸಿ ಆಹಾರ ಮೇಳ ಆಯೋಜಿಸಲು ತೀರ್ಮಾನಿಸಲಾಗಿದೆ. ಆಹಾರ ಮೇಳದಲ್ಲಿ ರಿಯಾಯಿತಿ ದರದಲ್ಲಿ ಶುಚಿ ಮತ್ತು ರುಚಿಯಾದ ಆಹಾರವನ್ನು ನಿಗದಿತ ಸ್ಥಳದಲ್ಲಿಯೇ ತಯಾರಿಸಿ ವಿತರಿಸಬೇಕು. ಸ್ಥಳೀಯ, ವಿಶೇಷ ಹಾಗೂ ಜನಪ್ರಿಯ ಪ್ರಾದೇಶಿಕ ಭೋಜನ ಉಣಬಡಿಸಬೇಕು. ಆಸಕ್ತರು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಶುಲ್ಕ₹100 ಪಾವತಿಸಬೇಕು. ₹3 ಸಾವಿರ ನೋಂದಣಿ, ₹10 ಸಾವಿರ ಠೇವಣಿ ಮೊತ್ತ ಭರಿಸಿ, ಜ. 22ರೊಳಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಮೊ.9845981413 ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವೀರನಗೌಡ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT