ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಾದಿ ಶರಣರು ಸ್ವತಂತ್ರವಾದಿಗಳು

ವಚನ ಶ್ರಾವಣ 'ಮನೆ ಮನಗಳಿಗೆ ಬಸವ' ಸಮಾರೋಪ
Last Updated 29 ಆಗಸ್ಟ್ 2022, 16:17 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಬಸವಾದಿ ಶರಣರು ಸ್ವತಂತ್ರವಾದಿಗಳಾಗಿದ್ದರು. ಸತ್ಯದ ಅರಿವು ಅವರಿಗಿದ್ದದ್ದರಿಂದ ಪರಾವಂಬಿಗಳಾಗಿರಲಿಲ್ಲ’ ಎಂದು ಕೊಟ್ಟೂರು ಸ್ವಾಮಿ ಮಠದ ಬಸವಲಿಂಗ ಸ್ವಾಮೀಜಿ ಹೇಳಿದರು.

ಬಸವ ಬಳಗದಿಂದ ನಗರದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ವಚನ ಶ್ರಾವಣ 'ಮನೆ ಮನಗಳಿಗೆ ಬಸವ' ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದ ಅವರು, ಯಾವುದೇ ಬಲವಂತದ ಕ್ರಿಯೆ ಪ್ರಯೋಜನವಾಗದು. ನನ್ನ ಉದ್ಧಾರವನ್ನು ನಾನೇ ಮಾಡಿಕೊಳ್ಳಬೇಕು. ಆಗ ಬದಲಾವಣೆ ಸಾಧ್ಯ ಎಂದು ಹೇಳಿ ಅದರಂತೆ ಬದುಕಿದವರು ಎಂದರು.

ಪೂಜೆ, ಪುನಸ್ಕಾರದಿಂದ ಪವಿತ್ರ ಆಗುವುದಲ್ಲ. ಸಕಲ ಜೀವಿಗಳಿಗೆ ಲೇಸು ಬಯಸುವುದು ಪವಿತ್ರ. ಇದನ್ನೇ ಬಸವಾದಿ ಶರಣರು ಪ್ರತಿಪಾದಿಸಿದರು. ನಮ್ಮ ನಡೆ, ನುಡಿಯಿಂದ ಇನ್ನೊಬ್ಬರಿಗೆ ಒಳಿತು ಬಯಸಬೇಕು. ಆಚಾರವೇ ಸ್ವರ್ಗ, ಅನಾಚಾರವೇ ನರಕ. ದಯೆಯೇ ಧರ್ಮದ ಮೂಲ. ಸಕಲ ಜೀವರಾಶಿಗಳಲ್ಲಿಯೂ ದಯೆಯಿರಬೇಕು ಎಂದು ಹೇಳಿದರು.

ಬುದ್ದನಾಗು, ಬಸವನಾಗು, ಅಲ್ಲಮನಾಗುಎಂದರೇ ಅವರವಿಚಾರಗಳನ್ನುಜೀವನದಲ್ಲಿ ಅನುಕರಿಸುವುದು. ವ್ಯಾವಹಾರಿಕ ಹಾಗೂ ವಾಸ್ತವಿಕ ಸತ್ಯಗಳನ್ನು ಅರ್ಥ ಮಾಡಿಕೊಳ್ಳಬೇಕು.ಪಂಚೇಂದ್ರಿಯಗಳೊಂದಿಗೆ ಮನಸ್ಸಿನ ದುರ್ಗುಣಗಳಿಗೂ ಸಂಸ್ಕಾರ ನೀಡಬೇಕು. ಖುಷಿ ಎಂಬುದು ಹೊರಗಿಲ್ಲ. ನಮ್ಮೊಳಗೆ ಅಡಗಿದೆ.ನಿತ್ಯ ಜಂಗಮರಾಗಿ ಚಲನಶೀಲರಾಗಬೇಕು ಎಂದು ತಿಳಿಸಿದರು.

ಬಸವ ಬಳಗದ ಅಧ್ಯಕ್ಷ ಬಸವ ಕಿರಣ. ಉಪಾಧ್ಯಕ್ಷ ಮಧುರಚೆನ್ನಶಾಸ್ತ್ರಿ ಹಿರೇಮಠ್, ಸಹ ಕಾರ್ಯದರ್ಶಿನಾಡಗೌಡ, ಖಜಾಂಚಿಮಹಾಂತರೆಡ್ಡಿ, ಸದಸ್ಯರಾದಗೌರಿಶ್ವರಪ್ಪ,ಮಾವಿನಹಳ್ಳಿ ಬಸವರಾಜ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣು ಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ. ರವಿಶಂಕರ್, ಕೊಟ್ಟೂರು ಸ್ವಾಮಿ ಕಲ್ಯಾಣ ಸಂಘದ ಪ್ರಧಾನ ಕಾರ್ಯದರ್ಶಿಸಾಲಿ ಸಿದ್ದಯ್ಯ ಸ್ವಾಮಿ, ವೀರಶೈವ ಲಿಂಗಾಯತ ಮಹಾಸಭಾ ಹೊಸಪೇಟೆ ತಾಲ್ಲೂಕು ಅಧ್ಯಕ್ಷಬಸವರಾಜ ಎಲ್. ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT