ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಿಶಿಷ್ಟರಿಗೆ ಸಿಗುವ ಎಲ್ಲಾ ಸೌಲಭ್ಯ ಜಂಗಮರಿಗೆ ಸಿಗಲಿ’

Last Updated 27 ಸೆಪ್ಟೆಂಬರ್ 2021, 13:42 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಬೇಡ ಜಂಗಮರು ಈಗಲೂ ಭಿಕ್ಷೆ ಬೇಡಿ ಬದುಕುತ್ತಿದ್ದಾರೆ. ಇಂತಹ ತುಳಿತಕ್ಕೆ ಒಳಗಾದ ಸಮಾಜಕ್ಕೆ ಸರ್ಕಾರ ಇತರೆ ಹಿಂದುಳಿದ ಸಮುದಾಯಗಳಂತೆ ಎಲ್ಲಾ ಸೌಲಭ್ಯ ಒದಗಿಸಬೇಕು’ ಎಂದು ಬೇಡ ಜಂಗಮ ಸಮಾಜದ ತಾಲ್ಲೂಕು ಅಧ್ಯಕ್ಷ ಎಸ್‌.ಎಂ. ಕಾಶಿನಾಥಯ್ಯ ಆಗ್ರಹಿಸಿದರು.

ನಗರದ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ಭಾನುವಾರ ಜರುಗಿದ ಬೇಡ ಜಂಗಮ ಸಮಾಜದ ಚಿಂತನ ಮಂಥನ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಎಲ್ಲಾ ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕು. ಪರಿಶಿಷ್ಟರಿಗೆ ಸಿಗುತ್ತಿರುವ ಎಲ್ಲಾ ಸವಲತ್ತು ಸಿಗಬೇಕು. ಈ ಸಂಬಂಧ ಮೊದಲ ಹಂತದಲ್ಲಿ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಒಂದುವೇಳೆ ಕಾಲಮಿತಿಯಲ್ಲಿ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟ ನಡೆಸಲಾಗುವುದು’ ಎಂದು ತಿಳಿಸಿದರು.

‘ನಾಡಿನ ಬೆಳವಣಿಗೆಯಲ್ಲಿ ಬೇಡ ಜಂಗಮ ಮಠಮಾನ್ಯಗಳ ಕೊಡುಗೆ ಅನನ್ಯ. ಶೀಘ್ರದಲ್ಲೇ 15ಕ್ಕೂ ಹೆಚ್ಚು ಸ್ವಾಮೀಜಿಗಳ ನಿಯೋಗದೊಂದಿಗೆ ಬೆಂಗಳೂರಿಗೆ ತೆರಳಿ ಸಿ.ಎಂ. ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು’ ಎಂದು ಹೇಳಿದರು.

ಬೆAಗಳೂರಿನ ಕೊಳಗುಮಠದ ಶಾಂತವೀರ ಸ್ವಾಮೀಜಿ, ಕಲ್ಯಾಣಮಠದ ಚನ್ನವೀರ ಸ್ವಾಮೀಜಿ, ಕರಿಸಿದ್ದೇಶ್ವರ ಸ್ವಾಮೀಜಿ, ಚಂದ್ರಶೇಖರ್ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಅಭಿನವ ಸ್ವಾಮೀಜಿ, ಆನುರಾಧೇಶ್ವರಿ ಅಮ್ಮ, ಜಂಗಮ ಸಮಾಜದ ತಾಲ್ಲೂಕು ಗೌರವ ಅಧ್ಯಕ್ಷ ಓ.ಎಂ.ಮಲ್ಲಿಕಾರ್ಜುನಯ್ಯ, ಕಾರ್ಯದರ್ಶಿ ಎನ್.ಎಂ.ರವಿಶಂಕರ್, ಮುಖಂಡರಾದ ಸಿದ್ದಲಿಂಗಯ್ಯ ಸೂರಿಮಠ, ಎಸ್.ಎಂ.ರವಿಶಂಕರ, ಎಸ್.ಎಂ.ರವಿಕಾಂತಯ್ಯ, ಎಸ್.ಎಂ.ವೀರಯ್ಯ, ಜಿ.ಎಂ.ಮಂಜುನಾಥ ಸ್ವಾಮಿ, ಎಸ್.ಎಂ.ಶಶಿಧರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT