ಭಾನುವಾರ, ಮೇ 9, 2021
26 °C

ಬಾಣಂತಿಯರಿಗೆ ಬೆಡ್ ಶೀಟ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಜನನಿ ಮಹಿಳಾ ಸಬಲೀಕರಣ ಸಮಿತಿಯಿಂದ ಭಾನುವಾರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಬೆಡ್‌ ಶೀಟ್‌ ವಿತರಿಸಲಾಯಿತು.

ನಗರಸಭೆ ಪರಿಸರ ಎಂಜಿನಿಯರ್‌ ಆರತಿ, ಹಿರಿಯ ಆಶಾ ಕಾರ್ಯಕರ್ತೆ ಸುಶೀಲಮ್ಮ ಅವರು ಬೆಡ್‌ ಶೀಟ್‌ ವಿತರಿಸುವ ಕೆಲಸಕ್ಕೆ ಚಾಲನೆ ನೀಡಿದರು.

ಆರತಿ ಮಾತನಾಡಿ, ‘ಜನನಿ ಸಮಿತಿಯು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ. ಇದು ನಿರಂತರವಾಗಿ ಮುಂದುವರೆಯಲಿ’ ಎಂದರು.

ಸಮಿತಿ ಅಧ್ಯಕ್ಷೆ ನಾಗವೇಣಿ ಹಂಪಿ ಮಾತನಾಡಿ, ‘ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗುವ ಎಲ್ಲ ಬಾಣಂತಿಯರಿಗೂ ಬೆಡ್‌ಶೀಟ್ ವಿತರಿಸುವ ಅಭಿಯಾನ‌ ನಿರಂತರವಾಗಿ ಮುಂದುವರೆಯಲಿದೆ’ ಎಂದು ಹೇಳಿದರು.

ಸಮಿತಿಯ ರೇಖಾರಾಣಿ, ಗೀತಾಶಂಕರ್, ರೋಫಿಯಾ, ಸ್ವಾತಿ ಸಿಂಗ್, ಕೆರೋಲಿನ್, ಆಯೀಷಾ, ರಾಜೇಶ್ವರಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು