ಶನಿವಾರ, ಸೆಪ್ಟೆಂಬರ್ 25, 2021
26 °C

ವಿಜಯನಗರ: ಧರ್ಮಸ್ಥಳಕ್ಕೆ ಬೈಸಿಕಲ್‌ನಲ್ಲಿ ಪ್ರವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಇಲ್ಲಿನ ಚಿತ್ತವಾಡ್ಗಿ ಹಾಗೂ ತಾಲ್ಲೂಕಿನ ಹೊಸೂರು ಗ್ರಾಮದ 40 ಯುವಕರು ಸೋಮವಾರ ಧರ್ಮಸ್ಥಳಕ್ಕೆ ಬೈಸಿಕಲ್‌ನಲ್ಲಿ ಪಯಣ ಬೆಳೆಸಿದರು.

ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು, ಆ. 15ರಂದು ಪುನಃ ನಗರಕ್ಕೆ ಮರಳುತ್ತಾರೆ. ಪ್ರತಿ ವರ್ಷ ಕ್ವಿಟ್‌ ಇಂಡಿಯಾ ಚಳವಳಿಯ ದಿನ ಬೈಸಿಕಲ್‌ನಲ್ಲಿ ಧರ್ಮಸ್ಥಳಕ್ಕೆ ಹೋಗುತ್ತಾರೆ. ಮಳೆ, ಬೆಳೆ, ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ.

ಚಿತ್ತವಾಡ್ಗಿಯ ಗಂಗಮ್ಮ ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗೆ ವಿಶೇಷ ಪೂಜೆ ನೆರವೇರಿಸಿದ ನಂತರ ಅಲಂಕರಿಸಿದ ಬೈಸಿಕಲ್‌ಗಳನ್ನು ತುಳಿಯುತ್ತ ಧರ್ಮಸ್ಥಳದ ಕಡೆಗೆ ಮುಖ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು