ಹೊಸಪೇಟೆ: ಏಪ್ರಿಲ್ 6ರಂದು ಬಿಜೆಪಿ ಸಂಸ್ಥಾಪನಾ ದಿನಾಚರಣೆ

ಹೊಸಪೇಟೆ (ವಿಜಯನಗರ): ಏ. 6ರಂದು ನಡೆಯಲಿರುವ ಬಿಜೆಪಿ ಸಂಸ್ಥಾಪನಾ ದಿನಾಚರಣೆಯ ಪೂರ್ವಭಾವಿ ಸಭೆ ಭಾನುವಾರ ನಗರದ ಪಕ್ಷದ ಕಚೇರಿಯಲ್ಲಿ ಜರುಗಿತು.
ಬಿಜೆಪಿ ಮಂಡಲ ಉಸ್ತುವಾರಿ ಪೂಜಪ್ಪ ಅವರು ಭಾರತಮಾತೆ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿ, ‘ಏ.6ರಂದು ದೇಶದಾದ್ಯಂತ ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲಾಗುವುದು. ಆ ದಿನ ಪಕ್ಷದ ಎಲ್ಲ ಕಾರ್ಯಕರ್ತರು ಬೆಳಿಗ್ಗೆ 9ರಿಂದ 10.30ರ ನಡುವೆ ತಮ್ಮ ಮನೆಗಳ ಮೇಲೆ ಪಕ್ಷದ ಧ್ವಜ ಹಾರಿಸಬೇಕು. ಆಯಾ ಬೂತ್ ಪ್ರಮುಖರಿಗೆ ಧ್ವಜಗಳನ್ನು ನೀಡಲಾಗುವುದು. ಕಾರ್ಯಕರ್ತರು ಅವರ ಬಳಿ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.
ಪಕ್ಷದ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಜೀವರತ್ನಂ, ಶಂಕರ್ ಮೇಟಿ, ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಪ್ಪ, ಅಲ್ಪಸಂಖ್ಯಾತರ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಟಿಂಕರ್ ರಫೀಕ್, ಮಹಿಳಾ ಮೋರ್ಚಾ ಮಂಡಲ ಕಾರ್ಯದರ್ಶಿ ಕವಿತಾ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀನಿವಾಸ, ಷಣ್ಮುಖ, ಗೋಪಿನಾಥ್ ನಾಯ್ಡು, ರಾಮಕೃಷ್ಣ, ಪ್ರಶಾಂತ್ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.