ಹೊಸಪೇಟೆ: ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಸಿಬ್ಬಂದಿ ಸದಾ ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಿರಬೇಕು. ಬೊಜ್ಜು ಬೆಳೆಸಿಕೊಳ್ಳಬಾರದು. ಶೀಘ್ರದಲ್ಲೇ ಬಿಎಂಐ ಯಂತ್ರದ ಮೂಲಕ ಬೊಜ್ಜು ಪರೀಕ್ಷೆ ಕಡ್ಡಾಯಗೊಳಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಹೇಳಿದರು.

ಇಲ್ಲಿನ ಡಿಎಆರ್ ಪೊಲೀಸ್ ಪರೇಡ್ ಮೈದಾನದಲ್ಲಿ ಭಾನುವಾರ ಪತಂಜಲಿ ಯೋಗ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಹೊಸಪೇಟೆ ಉಪವಿಭಾಗ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹಮ್ಮಿಕೊಳ್ಳಲಾಗಿರುವ 15 ದಿನಗಳ ಉಚಿತ ಯೋಗ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಯೋಗ, ಪ್ರಾಣಾಯಾಮಗಳಿಂದ ದೇಹದ ಬೊಜ್ಜು ಕರಗಿಸುವುದು ಮಾತ್ರವಲ್ಲ, ಮಾನಸಿಕ ಸದೃಢತೆ ಸಾಧಿಸಬಹುದು. ಫ್ಯಾಟ್ ಪರೀಕ್ಷೆ ಮುಂದಿನ ದಿನಗಳಲ್ಲಿ ಆಗಾಗ ನಡೆಯುತ್ತಲೇ ಇರಲಿದೆ, ಹೀಗಾಗಿ ಈ ಶಿಬಿರದಲ್ಲಿ ಮಾತ್ರವಲ್ಲ, ಮುಗಿದ ಮೇಲೂ ತಮ್ಮ ಮನೆಗಳಲ್ಲಿ ನಿತ್ಯ ಯೋಗ, ಪ್ರಾಣಾಯಾಮ ಮೂಲಕ ದೈಹಿಕ, ಮಾನಸಿಕ ದೃಢತೆ ಕಾಪಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

‘ಯೋಗ ಒಂದು ಜೀವನ ಪದ್ಧತಿ ಆಗಬೇಕು. ನಾವೆಲ್ಲರೂ ಒತ್ತಡದಲ್ಲೇ ಕೆಲಸ ಮಾಡುವವರು, ಆದರೆ ನಮ್ಮ ಆಂತರಿಕ ಒತ್ತಡ ನಿವಾರಿಸಲು ಯೋಗ ಪರಿಣಾಮಕಾರಿ. ಹೀಗಾಗಿ ಒತ್ತಾಯಕ್ಕಾಗಿ ಯೋಗ ತರಬೇತಿ ಮಾಡುತ್ತಿದ್ದೇವೆ ಎಂಬ ಭಾವನೆ ಯಾರಿಗೂ ಬೇಡ. ಕೇವಲ ಜಿಲ್ಲಾ ಕೇಂದ್ರದಲ್ಲಿ ಈ ತರಬೇತಿ ನೀಡುತ್ತಿಲ್ಲ, ಇತರ ಎರಡೂ ಉಪವಿಭಾಗಗಳಲ್ಲೂ ಈ ತರಬೇತಿ ಶಿಬಿರ ನಡೆಯಲಿದೆ. ಹೊಸಪೇಟೆಯಲ್ಲಿ ಪಾಲ್ಗೊಳ್ಳದವರಿಗಾಗಿ ಇನ್ನೊಂದು ತಂಡದಲ್ಲಿ ಯೋಗ ತರಬೇತಿ ನಡೆಯಲಿದೆ. ನಮ್ಮ ಕೋರಿಕೆ ಮನ್ನಿಸಿ, ಮೂರೂ ಉಪವಿಭಾಗಗಳಲ್ಲಿ ಯೋಗ ತರಬೇತಿ ನಡೆಸಲು ಸಮ್ಮತಿ ಸೂಚಿಸಿದ ಪತಂಜಲಿ ಯೋಗ ಸಮಿತಿಗೆ ಕೃತಜ್ಞರಾಗಿರುತ್ತೇವೆ’ ಎಂದು ಎಸ್ಪಿ ಹೇಳಿದರು.

ಎಎಸ್ಪಿ ಜಿ.ಮಂಜುನಾಥ್ ಮಾತನಾಡಿ, ಯೋಗದಿಂದ ದೇಹದ ಪ್ರತಿಯೊಂದು ಅಂಗವೂ ಸಚೇತನಗೊಳ್ಳುತ್ತದೆ ಎಂದರು. ಡಿವೈಎಸ್ಪಿ ಟಿ.ಮಂಜುನಾಥ್ ಮಾತನಾಡಿ, ಯೋಗ ನಮ್ಮ ದೈನಂದಿನ ಅಭ್ಯಾಸವಾಗಬೇಕು ಎಂದರು.

ಹಿರಿಯ ಯೋಗ ಸಾಧಕಿ ಉಮಾ ವಿಶ್ವನಾಥ್ ಮಾತನಾಡಿ, ವಯೋವೃದ್ಧರು ಸಹ ಯೋಗ ಅಭ್ಯಾಸ ಮಾಡಬಹುದು, ಮಾಡುವ ಮನಸ್ಸು ಬೇಕು ಅಷ್ಟೇ ಎಂದರು. ಹಿರಿಯ ಯೋಗ ಶಿಕ್ಷಕಿ ದಾಕ್ಷಾಯಿಣಿ ಶಿವಕುಮಾರ್ ಅವರು ಒತ್ತಡ ರಹಿತ ಜೀವನಕ್ಕೆ ಯೋಗ ಅನುಸರಿಸಿ ಎಂದು ಸಲಹೆ ನೀಡಿದರು. ಇನ್ನೊಬ್ಬ ಯೋಗ ಸಾಧಕಿ ನೂರ್ಜಾನ್ ಮಾತನಾಡಿ, ತಮ್ಮ ಕುಟುಂಬದ ಸದಸ್ಯರೇ ಪೊಲೀಸ್ ಇಲಾಖೆಯಲ್ಲಿದ್ದು, ಅಲ್ಲಿನ ಕೆಲಸದ ಒತ್ತಡದ ಅರಿವಿದೆ, ಯೋಗ ಅವರ ಜೀವನಕ್ಕೆ ನೆರವಾಗಲಿದೆ ಎಂದರು.

ಜಿಲ್ಲಾ ಯೋಗ ಸಮಿತಿಯ ಪ್ರಮುಖರಾದ ಅನಂತ ಜೋಶಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಾಡಿನ ಶಾಂತಿ, ಸೌಹಾರ್ದ ಕಾಪಾಡುವ ಪೊಲೀಸರು ಸದೃಢರಾಗಿರಬೇಕು. ಅದಕ್ಕೆ ಯೋಗ ಸಹಕಾರಿ ಎಂಬ ಪರಿಕಲ್ಪನೆ ಇಂದು ಸಾಕಾರಗೊಳ್ಳುತ್ತಿದೆ, ಪತಂಜಲಿಯ ಆಶಯವೂ ಇದೇ ಆಗಿದೆ ಎಂದರು.

ಯೋಗಾಭ್ಯಾಸದಲ್ಲಿ ಪೊಲೀಸರು: ಆರಂಭದಲ್ಲಿ ದಾಕ್ಷಾಯಿಣಿ ಶಿವಕುಮಾರ್ ಅವರು ಪಾಲ್ಗೊಂಡ 200ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗೆ ಯೋಗ, ಪ್ರಾಣಾಯಾಮದ ಮಹತ್ವ ತಿಳಿಸಿ, ಸುಮಾರು ಒಂದು ಗಂಟೆ ತರಬೇತಿ ನೀಡಿದರು. ಎಸ್ಪಿ, ಎಎಸ್ಪಿ, ಡಿವೈಎಸ್ಪಿ ಸಹಿತ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಸ್ವತಃ ಯೋಗ ಮಾಡಿ ಖುಷಿಪಟ್ಟರು. ಉಮಾ ವಿಶ್ವನಾಥ್ ಮತ್ತು ನೂರ್ಜಾನ್ ಸಹಮಾರ್ಗದರ್ಶನ ನೀಡಿದರು.

ಇನ್ನು 14 ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ 6.30ರಿಂದ 7.30ರವರೆಗೆ ಪೊಲೀಸ್ ಸಿಬ್ಬಂದಿಗೆ ಯೋಗ ತರಬೇತಿ ಶಿಬಿರ ಪರೇಡ್ ಮೈದಾನದಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.