ಪ್ರಜಾವಾಣಿ ವಾರ್ತೆ

ಹೊಸಪೇಟೆ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಖಾಲಿಯಿರುವ ಅತಿಥಿ ಶಿಕ್ಷಕರು, ಉಪನ್ಯಾಸಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಆಯ್ಕೆ ಮಾಡಲು ಜೂನ್ 1ರಂದು ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.

ಮಾಹಿತಿಗೆ 08394-200206 ಸಂಪರ್ಕಿಸಲು ತಿಳಿಸಲಾಗಿದೆ.

ತೋಟಗಾರಿಕೆ ರೈತರಿಗೆ ಸಹಾಯಧನ

ಹೊಸಪೇಟೆ: ಕೂಡ್ಲಿಗಿ ತಾಲ್ಲೂಕಿನ ತೋಟಗಾರಿಕೆ ಇಲಾಖೆ ವತಿಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಹನಿ ನೀರಾವರಿ), ಮತ್ತು ವಿವಿಧ ಯೋಜನೆಗಳಡಿಯಲ್ಲಿ ಅರ್ಹ ಫಲಾನುಭವಿಗಳ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಮಾಹಿತಿಗೆ ಸ್ಥಳೀಯ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

ಸೂರ್ಯಕಾಂತಿ ಖರೀದಿ ಆರಂಭ

ಹೊಸಪೇಟೆ: ಹಿಂಗಾರು ಹಂಗಾಮಿನ ಎಫ್ಎಕ್ಯು ಗುಣಮಟ್ಟದ ಸೂರ್ಯಕಾಂತಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಲ್ಗೆ ₹ 7,280ರಂತೆ ದರ ನಿಗದಿಪಡಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇಟಗಿ, ನಂದಿಬೇವೂರು, ಹುರುಳಿಹಾಳು, ಉಪನಾಯಕನಹಳ್ಳಿ ಮತ್ತು ಕೋಗಳಿ ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿ ನಿಯಮಿತ (ಕೆಒಎಫ್) ಅಡಿಯಲ್ಲಿ ಒಜಿಸಿಎಸ್ ಖರೀದಿ ಏಜೆನ್ಸಿ ಕೇಂದ್ರಗಳಿವೆ.

‘ಮೇ 16ರಿಂದ 90 ದಿನಗಳವರೆಗೆ ಖರೀದಿಸಲಾಗುವುದು. ರೈತರು ತಮ್ಮ ಹೆಸರನ್ನು 80 ದಿನಗಳೊಳಗೆ ನೋಂದಣಿ ಮಾಡಿಸಿ ಚೀಟಿ ಪಡೆಯಬೇಕು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂನ್ 1ರಂದು ಹೂವಿನಹಡಗಲಿ ಉಪನೋಂದಣಿ ಕಚೇರಿ ಕೆಲಸ

ಹೊಸಪೇಟೆ: ಜಿಲ್ಲೆಯ ಒಂದು ಉಪನೋಂದಣಿ ಕಚೇರಿ ಪ್ರತಿ ಭಾನುವಾರ, 2ನೇ ಶನಿವಾರ ಹಾಗೂ 4ನೇ ಶನಿವಾರದ ರಜಾದಿನಗಳಂದು ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಅದರಂತೆ ಹೂವಿನಹಡಗಲಿಯ ಕಚೇರಿ ಜೂನ್ 1ರಂದು ತೆರೆದಿರಲಿದ್ದು, ಜೂನ್ 3ರಂದು ಕಚೇರಿಗೆ ರಜೆ ಇರಲಿದೆ’ ಎಂದು ಜಿಲ್ಲಾ ನೋಂದಾಣಾಧಿಕಾರಿ ಸೈಯದ್ ಖಾದರ್ ಕೊಪ್ಪಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.