ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಜಗದ್ಗುರು ಕೊಟ್ಟೂರು ಸಂಸ್ಥಾನ ಮಠದ ಬಸವಲಿಂಗ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಶಾಸಕ ಎಚ್.ಆರ್.ಗವಿಯಪ್ಪ ಪ್ರದರ್ಶನ ಉದ್ಘಾಟಿಸುವರು. ‘ಹುಡಾ’ ಅಧ್ಯಕ್ಷ ಎಚ್.ಎನ್.ಎಫ್.ಮೊಹಮ್ಮದ್ ಇಮಾಮ್ ನಿಯಾಜಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ತಕ್ಷ ಅಶ್ವಿನ್ ಕೋತಂಬರಿ ಮುಖ್ಯ ಅತಿಥಿಯಾಗಿರುವುವರು. ಪಿಡಿಐಟಿ ಕಾಲೇಜಿನ ಅಧ್ಯಕ್ಷ ಕೆ.ಎಸ್.ಬಾದಾಮಿ, ಹೊಸಪೇಟೆ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಮೌಲಾ ಸಾಬ್, ಸ್ಯಾಮ್ ಮೆಟಾಲಿಕ್ಸ್ ಅ್ಯಂಡ್ ಎನರ್ಜಿ ಸಂಸ್ಥೆಯ ಎಜಿಎಂ ಮೊಹಮ್ಮದ್ ವಾಸಿಂ, ಆರ್.ಕೆ.ಸೇಲ್ಸ್ ಕಾರ್ಪೊರೇಷನ್‌ನ ಪಾಲುದಾರ ಅಜಯ್ ಅಗರ್‌ವಾಲ್ ಪಾಲ್ಗೊಳ್ಳುವರು. ಎಸಿಸಿಇ ಆ್ಯಂಡ್ ಎ ಅಧ್ಯಕ್ಷ ಬಿ.ಶ್ರೀಪಾದ, ಕಾರ್ಯದರ್ಶಿ ಡಿ.ಚಂದ್ರಶೇಖರ್ ಪಾಲ್ಗೊಳ್ಳುವರು. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.