ಮರಿಯಮ್ಮನಹಳ್ಳಿ (ವಿಜಯನಗರ): ಇಲ್ಲಿಗೆ ಸಮೀಪದ 114-ಡಣಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಸರಣಿ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿದೆ.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕಿತ್ನೂರು ಗ್ರಾಮದ ಸುಜಾತ(40) ಹಾಗೂ ಅವರ ತಂದೆ ನಾಗಪ್ಪ(80) ಮತ್ತು ಮತ್ತೊಂದು ಬೈಕ್ನಲ್ಲಿದ್ದ ತಾಳೇಬಸಾಪುರ ತಾಂಡಾದ ದುರುಗಪ್ಪ(55) ಎಂದು ಗುರುತಿಸಲಾಗಿದ್ದು, 20 ಜನ ತೀವ್ರ ಗಾಯಗೊಂಡಿದ್ದಾರೆ.

ದೆಹಲಿಯಿಂದ ಬೆಂಗಳೂರಿಗೆ ಬೆಳ್ಳುಳ್ಳಿ ಚೀಲಗಳನ್ನು ತುಂಬಿಕೊಂಡು ಸಾಗುತ್ತಿದ್ದ ಲಾರಿ ಸರಣಿ ಅಪಘಾತಕ್ಕೆ ಕಾರಣವಾಗಿದ್ದು, ಆ ಲಾರಿ ಮೂರು ಬೈಕ್ ಸೇರಿದಂತೆ ಒಂದು ಬಸ್, ಕ್ಯಾಂಟರ್, ಕಾರು ಹಾಗೂ ಕಂಟೇನರ್ ಲಾರಿಗೆ ಗುದ್ದಿ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ತೀವ್ರ ಗಾಯಗೊಂಡ 20 ಜನರಲ್ಲಿ ಆರು ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದ್ದು, ಉಳಿದ 14 ಜನರಿಗೆ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.