ಮಂಗಳವಾರ, ಮೇ 18, 2021
24 °C

ಸೇನೆ ಕಾರ್ಯಕರ್ತರಿಂದ ಹಂಪಿಯಲ್ಲಿ ಸ್ವಚ್ಛತಾ ಕಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ವಿಜಯನಗರ ಸಂಸ್ಥಾಪನಾ ದಿನ ಹಾಗೂ ವಿಶ್ವ ಪರಂಪರೆ ದಿನದ ಪ್ರಯುಕ್ತ ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣ ಸೇನೆಯಿಂದ ಭಾನುವಾರ ತಾಲ್ಲೂಕಿನ ಹಂಪಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.

ಹಂಪಿ ತುರ್ತಾ ಕಾಲುವೆ ಸಮೀಪದ ರಾಜ್ಯ ಪುರಾತತ್ವ ಇಲಾಖೆಗೆ ಸೇರಿದ ಐತಿಹಾಸಿಕ ಶಿವ ದೇವಾಲಯದ ಸುತ್ತಲೂ ಬೆಳೆದಿದ್ದ ಗಿಡ, ಮುಳ್ಳು ಕಂಟಿ ತೆರವುಗೊಳಿಸಿದರು. ಅಲ್ಲೆಲ್ಲ ಬಿದ್ದಿದ್ದ ತ್ಯಾಜ್ಯವನ್ನು ಬೇರೆಡೆ ಸ್ಥಳಾಂತರಿಸಿದರು.

‘ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ವ್ಯಾಪ್ತಿಯ ಸ್ಮಾರಕಗಳಿಗೆ ಇರುವ ಪ್ರಾಮುಖ್ಯತೆ ರಾಜ್ಯ ಪುರಾತತ್ವ ಇಲಾಖೆ ಸ್ಮಾರಕಗಳಿಗೂ ಸಿಗಬೇಕು. ಅನೇಕ ಸುಂದರ ದೇವಾಲಯ, ಸ್ಮಾರಕಗಳು ಗಿಡ, ಮರ, ಮುಳ್ಳು ಕಂಟಿಗಳಿಂದ ಮರೆಯಾಗಿವೆ. ಅದನ್ನು ತೆರವುಗೊಳಿಸಿ, ಜೀರ್ಣೊದ್ಧಾರಗೊಳಿಸಬೇಕು’ ಎಂದು ಸೇನೆಯ ಅಧ್ಯಕ್ಷ ವಿಶ್ವನಾಥ ಮಾಳಗಿ ತಿಳಿಸಿದರು.

ರಾಚಯ್ಯ ಸ್ಥಾವರಿಮಠ, ಈರಣ್ಣ ಕೆ. ಪೂಜಾರಿ, ಪ್ರವೀಣ್‌ ಕಮಲಾಪುರ, ವೀರೇಂದ್ರ ಸೇನಾ ನಾಯಕ, ಹೇಮಗಿರಿ, ಭೀಮಯ್ಯ ಜೋಗದ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು