ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮು ಗಲಭೆ, ಪ್ರಚೋದನೆಗೆ ಮತ ಸಿಗಲ್ಲ: ಜಿ.ಟಿ.ದೇವೇಗೌಡ

Last Updated 29 ಮಾರ್ಚ್ 2022, 11:44 IST
ಅಕ್ಷರ ಗಾತ್ರ

ಹೊಸಪೇಟೆ:‘ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ಹಿಜಾಬ್ ಕುರಿತು ಪ್ರಚೋದನಕಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಅದರಿಂದ ಅವರಿಗೆ ಮತಗಳು ಸಿಗಲ್ಲ’ ಎಂದು ಶಾಸಕರೂ ಆದ ಜಿ.ಟಿ.ದೇವೇಗೌಡ ಹೇಳಿದರು.

ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಉಭಯ ಪಕ್ಷಗಳ ಮುಖಂಡರ ಪ್ರಚೋದನಕಾರಿ ಹೇಳಿಕೆಗಳಿಂದ ಜನರಲ್ಲಿ ಅಸಹ್ಯ ಹುಟ್ಟಿದೆ. ಪಕ್ಷಗಳು ಒಗ್ಗಟ್ಟಾಗಿ ದೇಶ ಮತ್ತು ರಾಜ್ಯದ ರಕ್ಷಣೆ ಕುರಿತು ಹೇಳಿಕೆ ನೀಡಬೇಕು. ಹಿಂದೂ–ಮುಸ್ಲಿಮರು ಹಳ್ಳಿಗಳಲ್ಲಿ ಈಗಲೂ ಭಾವೈಕ್ಯತೆಯಿಂದ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುತ್ತಿದ್ದಾರೆ. ಸುಖಾಸುಮ್ಮನೆ ರಾಜಕೀಯ ಲಾಭಕ್ಕಾಗಿ ಕೋಮು ಪ್ರಚೋದನೆ ಹೇಳಿಕೆ ಕೊಡಬಾರದು’ ಎಂದು ತಾಕೀತು ಮಾಡಿದರು.

‘ನನ್ನ ಮುಂದಿನ ರಾಜಕೀಯ ನಡೆ ಕುರಿತು ಕ್ಷೇತ್ರದ ಮತದಾರರು ನಿರ್ಧರಿಸಲಿದ್ದಾರೆ. ಅವರು ತೋರಿಸುವ ಮಾರ್ಗದಲ್ಲಿ ಮುನ್ನಡೆಯುವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT