ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಬುಕ್ಕಸಾಗರ ಗ್ರಾಮದಲ್ಲಿ ಬುಧವಾರ ಸಂಜೆ ಕರಡಿಯೊಂದು ರೈತನ ಮೇಲೆ ದಾಳಿ ನಡೆಸಿದ್ದು, ರೈತನ ಕೈಗೆ ತೀವ್ರ ಗಾಯವಾಗಿದ್ದು, ಕಾಲಿಗೆ ಸಹ ಗಾಯವಾಗಿದೆ.

ರೈತ ಸಿ.ರಾಜಶೇಖರ ಗೌಡ ಅವರು ತಮ್ಮ ಕಬ್ಬಿನ ಹೊಲಕ್ಕೆ ನೀರು ಹಾಯಿಸಲು ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಹೋಗಿದ್ದಾಗ ಕರಡಿ ಅವರ ಮೇಲೆ ದಾಳಿ ನಡೆಸಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

‘ರಾಜಶೇಖರ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾವು ಸ್ಥಳದಲ್ಲೇ ಇದ್ದು, ಪರಿಶೀಲನೆ ನಡೆಸುತ್ತಿದ್ದೇವೆ’ ಎಂದು ಆರ್ಎಫ್ಒ ಕೌಶಿಕ್ ದಳವಾಯಿ ತಿಳಿಸಿದರು.

ಎರಡನೇ ಪ್ರಕರಣ: ಬುಕ್ಕಸಾಗರ ಸಮೀಪದ ವೆಂಕಟಾಪುರ ಬಳಿ ಈಚೆಗೆ ಕರಡಿಯೊಂದು ರಾಯಪ್ಪ ಎಂಬುವವರ ಮೇಲೆ ದಾಳಿ ನಡೆಸಿತ್ತು. ಅವರ ಮುಖ, ಕಣ್ಣಿಗೆ ತೀವ್ರ ಗಾಯವಾಗಿತ್ತು. ಕೆಲವು ದಿನಗಳ ಹಿಂದೆಯಷ್ಟೇ ಅವರು ಅಸ್ಪತ್ರೆಯಿಂದ ಮನೆಗೆ ಬಂದಿದ್ದರು ಹಾಗೂ ಈಗಲೂ ಗಾಯದಿಂದ ಚೇತರಿಸುತ್ತಿದ್ದಾರೆ ಅಷ್ಟೇ. ಈ ಘಟನೆ ಮರೆಯುವ ಮೊದಲೇ ಮತ್ತೊಂದು ಕರಡಿ ದಾಳಿ ನಡೆದಿದೆ.

ರೈತರ ಆಗ್ರಹ: ಕರಡಿ ದಾಳಿಗೆ ಒಳಗಾದ ರೈತರಿಗೆ ಸೂಕ್ತ ಚಿಕಿತ್ಸೆ, ಪರಿಹಾರ ನೀಡಬೇಕು, ಕರಡಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಗಂಭೀರ ಪ್ರಯತ್ನ ನಡೆಸಬೇಕು ಎಂದು ಬುಕ್ಕಸಾಗರದ ರೈತ ಮುಖಂಡ ಎಲ್.ಎಸ್.ರುದ್ರಪ್ಪ ಒತ್ತಾಯಿಸಿದ್ದಾರೆ.

ಬುಕ್ಕಸಾಗರ ಸನಿಹದಲ್ಲೇ ಪಕ್ಕದಲ್ಲೇ ದರೋಜಿ ಕರಡಿಧಾಮ ಇದ್ದು, ಕೆಲವು ವರ್ಷಗಳ ಹಿಂದೆ ಕರಡಿ ದಾಳಿಯಿಂದ ಈ ಭಾಗದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಅದರ ಹೊರತಾಗಿ ಮನುಷ್ಯರ ಮೇಲೆ ದಾಳಿ ನಡೆಸಿದ ಪ್ರಸಂಗ ಅಷ್ಟಾಗಿ ವರದಿಯಾಗಿರಲಿಲ್ಲ. ಆದರೆ ತಿಂಗಳಿಂದೀಚೆಗೆ ಪರಿಸ್ಥಿತಿ ಬದಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.