ಭಾನುವಾರ, ಮೇ 29, 2022
21 °C

ಹೊಸಪೇಟೆ: ಚೌಡಯ್ಯ ಜಯಂತಿ, ದಾಸೋಹ ದಿನ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ನಗರದ ವಿವಿಧ ಕಡೆಗಳಲ್ಲಿ ಶುಕ್ರವಾರ ಶಿವಶರಣ ಅಂಬಿಗರ ಚೌಡಯ್ಯ ಜಯಂತಿ ಹಾಗೂ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ್ ಸ್ವಾಮೀಜಿ ಲಿಂಗೈಕ್ಯರಾದ ದಿನದ ನಿಮಿತ್ತ ದಾಸೋಹ ದಿನ ಆಚರಿಸಲಾಯಿತು.

ಜಿಲ್ಲಾಡಳಿತ: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಮಹೇಶ್‌ಬಾಬು ಅವರು ಅಂಬಿಗರ ಚೌಡಯ್ಯ, ಶಿವಕುಮಾರ್‌ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಗಂಗಾಮತ ಸಮಾಜದ ಗೌರವ ಅಧ್ಯಕ್ಷ ವೈ. ಯಮುನೇಶ್‌ ಮಾತನಾಡಿ, ಕನ್ನಡ ನಾಡಿನ ಇತಿಹಾಸದಲ್ಲಿ 12ನೇ ಶತಮಾನಕ್ಕೆ ವಿಶೇಷ ಮಹತ್ವವಿದೆ. ಆ ಕಾಲಘಟ್ಟದಲ್ಲಿ ಬಸವಣ್ಣನವರ ಸಾಮಾಜಿಕ ಕ್ರಾಂತಿಯಲ್ಲಿ ಚೌಡಯ್ಯನವರು ಭಾಗಿಯಾಗಿದ್ದರು. ಅವರ ನೇರ ನಡೆ-ನುಡಿ, ಕಾಯಕನಿಷ್ಠೆ, ಪ್ರಜ್ವಲ ವ್ಯಕ್ತಿತ್ವ, ನಿಷ್ಠುರ ಮಾತುಗಳಿಂದ ಮನೆ ಮಾತಾಗಿದ್ದಾರೆ. ಮನುಕುಲದ ಏಳಿಗೆಗಾಗಿ ಶ್ರಮಿಸಿದವರನ್ನು ಜಾತಿಯ ಸಂಕೋಲೆಯಲ್ಲಿ ಸೀಮಿತಗೊಳಿಸುವುದು ಸರಿಯಲ್ಲ ಎಂದರು.

ಗಂಗಾಮತ ಸಮಾಜದ ಅಧ್ಯಕ್ಷ ಎಸ್.ಗಾಳೆಪ್ಪ, ಕಾರ್ಯದರ್ಶಿ ಮೇಘನಾಥ್, ಮುಖಂಡರಾದ ಬಾರಿಕೇರ್ ನಾಗರಾಜ, ರಾಮಾಲಿ ಮಂಜುನಾಥ, ಕೂಡ್ಲಿಗಿ ಪಕ್ಕೀರಪ್ಪ, ತಳಕಲ್ ಹನುಮಂತ, ಕೆ.ನಾಗರಾಜ, ಜಾಲಗಾರ ಉಮೇಶ, ಕಂಪ್ಲಿ ಹುಲುಗಪ್ಪ, ಜಂಬಯ್ಯ, ಕಂಪ್ಲಿ ಸಾಗರ, ಕಬ್ಬೇರ್ ಹುಲುಗಪ್ಪ ಇದ್ದರು.

ಕರ್ನಾಟಕ ಪ್ರದೇಶ ಯುವ ಕುರುಬರ ಸಂಘ, ಸಂಗೊಳ್ಳಿ ರಾಯಣ್ಣ ಸಾಮಾಜಿಕ ಶೈಕ್ಷಣಿಕ ಸೇವಾ ಟ್ರಸ್ಟ್: ನಗರದ ತಾಲ್ಲೂಕು ಕುರುಬರ ಸಂಘದ ಕಟ್ಟಡದಲ್ಲಿ ದಾಸೋಹ ದಿನ ಆಚರಿಸಲಾಯಿತು. ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು