ಹರಪನಹಳ್ಳಿ: ‘ಮಾಜಿ ಶಾಸಕ ದಿವಂಗತ ಶಾಮನೂರು ಶಿವಶಂಕರಪ್ಪ ಅವರ 96ನೇ ವರ್ಷದ ಜನ್ಮ ದಿನದ ಪ್ರಯುಕ್ತ ಜೂನ್ 17ರಂದು ದಾವಣಗೆರೆ ನಗರದಲ್ಲಿ ಉಚಿತ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದ್ದು, ಜೂನ್ 10ರೊಳಗೆ ಹೆಸರು ನೋಂದಾಯಿಸಬೇಕು’ ಎಂದು ಅರಸೀಕೆರೆ-ಬಿಳಿಚೋಡು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಮ್ಮತ್ತಹಳ್ಳಿ ಮಂಜುನಾಥ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10ಕ್ಕೆ ದಾವಣಗೆರೆ ಬಾಪೂಜಿ ಎಂ.ಬಿ.ಎ. ಕಾಲೇಜು ಮೈದಾನದಲ್ಲಿ ಸಾಮೂಹಿಕ ವಿವಾಹಗಳು ಜರುಗಲಿವೆ’ ಎಂದರು.

ಎಸ್.ಎಂ.ಮಲ್ಲಿಕಾರ್ಜುನ ಅಭಿಮಾನಿ ಬಳಗದ ಮುಖಂಡ ಪರಶುರಾಮಪ್ಪ ಮಾತನಾಡಿ, ‘ವಧುವಿಗೆ ಬಟ್ಟೆ, ತಾಳಿ, ಕಾಲುಂಗುರ, ವರನಿಗೆ ಬಟ್ಟೆ ಹಾಗೂ ವಿಶೇಷ ಉಡುಗೊರೆ ನೀಡಲಾಗುವುದು. ವಧು ವರರಿಗೆ ವಸತಿ ಸೌಲಭ್ಯ ಹಾಗೂ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ವಿಧುರ, ವಿಧವೆಯರ ವಿವಾಹಕ್ಕೆ ಅವಕಾಶವಿದೆ’ ಎಂದು ಮಾಹಿತಿ ನೀಡಿದರು.

ವಧು ವರರ ಆಧಾರ್ ಕಾರ್ಡ್, ಶಾಲಾ ವರ್ಗಾವಣೆ ಪ್ರತಿ, ಜಾತಿ ಪ್ರಮಾಣ ಪತ್ರ, 2 ಭಾವಚಿತ್ರ, ವಿವಾಹ ಆಗದಿರುವ ಬಗ್ಗೆ ಗ್ರಾಮ ಪಂಚಾಯಿತಿ ದೃಢೀಕರಣ, ವಯಸ್ಸಿನ ದೃಢೀಕರಣ ಪ್ರತಿಗಳನ್ನು ಸಲ್ಲಿಸಬೇಕು. ಹೆಸರು ನೊಂದಾಯಿಸಲು ಎಂ.ವಿ. ಅಂಜಿನಪ್ಪ (9448338704) ಹಾಗೂ ಮಂಜನಾಯ್ಕ (9886344583) ಅವರನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಕುಬೇರಪ್ಪ, ಎಂ.ವಿ.ಅಂಜಿನಪ್ಪ, ಮುಖಂಡ ಮಂಜುನಾಥ ಮಾತನಾಡಿದರು. ಟಿ.ವೆಂಕಟೇಶ್, ಮೈದೂರು ರಾಮಪ್ಪ, ಹುಲಿಕಟ್ಟಿ ಚಂದ್ರಪ್ಪ, ಎಚ್.ವಸಂತಪ್ಪ, ಎಲ್.ಮಂಜನಾಯ್ಕ, ಹರೀಶ ದಂಡಿನ, ಗುಡಿ ನಾಗರಾಜ್, ಚಿಕ್ಕೇರಿ ಬಸಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-25-340893242

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.