ಹೊಸಪೇಟೆ (ವಿಜಯನಗರ): ರಾಜ್ಯ ಬಜೆಟ್ ಶುಕ್ರವಾರ ಮಂಡನೆಯಾಗಲಿದ್ದು, ಈ ಬಜೆಟ್ ದಲಿತರ, ಬಡವರ ಮನೆಗಳಿಗೆ ತಲುಪುವಂತಾಗಬೇಕು ಎಂದು ದಲಿತ ಹಕ್ಕುಗಳ ಸಮಿತಿ ಕರ್ನಾಟಕ (ಡಿಎಚ್ಎಸ್) ಸರ್ಕಾರವನ್ನು ಒತ್ತಾಯಿಸಿದೆ.

ಡಿಎಚ್ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಜಂಬಯ್ಯ ನಾಯಕ ನೇತೃತ್ವದಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಸಮಾವೇಶಗೊಂಡ ಮುಖಂಡರು, ರಾಜ್ಯದಲ್ಲಿ ದಲಿತರು ಶೇ 24.17ರಷ್ಟಿದ್ದು, 13 ವರ್ಷಗಳಿಂದ ₹3.46 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ಹೇಳುತ್ತವೆ. ಆದರೆ ಈ ಹಣ ನಿಜವಾಗಿ ದಲಿತರ ಕುಟುಂಬಗಳ ಅಭಿವೃದ್ದಿಗೆ ತಲುಪಿಲ್ಲ ಎಂಬುದನ್ನು ತಿಳಿಸಿದರು.

ಹಕ್ಕೊತ್ತಾಯಗಳು: ಮನೆ, ನಿವೇಶನ, ಭೂಮಿ, ಶಿಕ್ಷಣ, ಉದ್ಯೋಗ, ಆಹಾರ– ಆರೋಗ್ಯದ ಹಕ್ಕು ದಲಿತರಿಗೆ ಸಿಗುವಂತೆ ಬಜೆಟ್ ಮಂಡಿಸಬೇಕು, ಎಸ್ಸಿಎಸ್ಪಿ, ಟಿಎಸ್ಪಿ ಉಪಯೋಜನೆಗಳ ಸಾಧಕ ಬಾಧಕಗಳ ಕುರಿತು ವಿಧಾನಸಭೆಯಲ್ಲಿ ಸಮಗ್ರ ಚರ್ಚೆಯಾಗಬೇಕು. ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ವಿಶೇಷ ಹಣಕಾಸಿನ ನೆರವು ನೀಡಬೇಕು. ಕಳೆದ 24-ವರ್ಷಗಳಿಂದ ದುಡಿಯುತ್ತಿರುವ ಇಲ್ಲಿನ ಹೊರಗುತ್ತಿಗೆ ನೌಕರರ 11-ತಿಂಗಳ ಸಂಬಳ ಪಾವತಿಗೆ ಕ್ರಮ ಕೈಗೊಳ್ಳಬೇಕು. ಹೊಸಪೇಟೆಯಲ್ಲಿ ಸರ್ಕಾರ, ಸಹಕಾರಿ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ತಕ್ಷಣ ಸಕ್ಕರೆ ಕಾರ್ಖಾನೆ ಪ್ರಾರಂಭಿಸಬೇಕು. ಎಸ್ಸಿಎಸ್ಟಿ ನಿರುದ್ಯೋಗಿಗಳಿಗೆ ಮಾಸಿಕ ₹10 ಸಾವಿರ ನಿರುದ್ಯೋಗ ಭತ್ಯೆ ನೀಡಬೇಕು. ಜತೆಗೆ ಇನ್ನಷ್ಟು ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಯಿತು.

ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಕಳುಹಿಸಿಕೊಡಲಾಯಿತು. ಮುಖಂಡರಾದ ಬಿ.ತಾಯಪ್ಪ ನಾಯಕ, ಎಚ್.ಡಿ.ಚಂದ್ರಪ್ಪ, ಸೂರ್ಯನಾರಾಯಣ, ನಾಗೂ ನಾಯ್ಕ್, ಗದಿಗೆಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.