ಹೊಸಪೇಟೆ (ವಿಜಯನಗರ): ಜಾಗತಿಕ ತಾಪಮಾನ ಕಡಿಮೆ ಮಾಡಲು, ನಮ್ಮೆಲ್ಲರ ಆರೋಗ್ಯ ಸುಧಾರಿಸಲು, ಸಂತಾನಶಕ್ತಿ ಹೆಚ್ಚಿಸಲು ಸಿರಿಧಾನ್ಯವಷ್ಟೇ ಪರಿಹಾರ. ಅಕ್ಕಿ, ಗೋಧಿ, ಮಾಂಸಾಹಾರ, ಹಾಲು ಸೇವನೆ ಕಡಿಮೆ ಮಾಡಿದರಷ್ಟೇ ಮನುಕುಲಕ್ಕೆ ಒಳಿತು ಇದೆ ಎಂದು ಆಹಾರ ತಜ್ಞ ಡಾ.ಖಾದರ್ ವಲಿ ಹೇಳಿದರು.

ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್ (ಜೀತೊ) ಹೊಸಪೇಟೆ ಘಟಕದ ವತಿಯಿಂದ ಭಾನುವಾರ ಇಲ್ಲಿ ನಡೆದ ‘ಸಿರಿಧಾನ್ಯದೊಂದಿಗೆ ಸ್ಮಾರ್ಟ್ ಪೌಷ್ಟಿಕಾಂಶ’ ಎಂಬ ಕಾರ್ಯಕ್ರಮದಲ್ಲಿ ಅವರು ಸಿರಿಧಾನ್ಯಗಳ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.

‘ಜಾಗತಿಕ ತಾಪಮಾನ ಏರಿಕೆಗೆ ಮುಖ್ಯ ಕಾರಣವೇ ಮಾಂಸಾಹಾರ. ಭಾರತದಲ್ಲೂ ಇಂದು ಮಾಂಸಾಹಾರ ಸೇವನೆ ಶೇ 65ಕ್ಕೆ ಹೆಚ್ಚಳವಾಗಿದೆ. ರಾಸಾಯನಿಕ ಗೊಬ್ಬರಗಳನ್ನು ತಯಾರಿಸುವ ಕಂಪನಿಗಳು ಅಕ್ಕಿ, ಗೋಧಿಯನ್ನು ತಿನ್ನಲು ಪ್ರೇರೇಪಿಸಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತಿವೆ’ ಎಂದು ಅವರು ವಿವರಿಸಿದರು.

‘1 ಕೆ.ಜಿ.ಮಾಂಸ ಸೇವನೆಯಿಂದ 8 ಎಕರೆ ಅರಣ್ಯ ನಾಶವಾಗುತ್ತದೆ, ಸಹಜವಾಗಿಯೇ ತಾಪಮಾನ ಹೆಚ್ಚಳವಾಗುತ್ತದೆ. ಸಿರಿಧಾನ್ಯ ತಿನ್ನುವುದೇ ಅಹಿಂಸಾ ವಿಧಾನ, ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿಟ್ಟ ನೀರನ್ನು ಕುಡಿಯಲೇ ಬೇಡಿ. ಪ್ಲಾಸ್ಟಿಕ್ ಪೊಟ್ಟಣದಲ್ಲಿ ತರುವ ಆಹಾರಗಳನ್ನು ಸಹ ಸೇವಿಸಬೇಡಿ. ಹಾಲು ಬಳಕೆಯನ್ನು ಸಹ ಕಡಿಮೆ ಮಾಡಿ. ಅಡುಗೆ ಮನೆಯಲ್ಲಿ ಇರುವ ಪದಾರ್ಥಗಳೇ ನಮ್ಮ ಆರೋಗ್ಯ ವರ್ಧಕಗಳು, ಅವುಗಳನ್ನು ಬಳಸುವತ್ತ ಗಮನ ಹರಿಸಿ.’ ಎಂದು ಅವರು ಕಿವಿಮಾತು ಹೇಳಿದರು.

‘ಆಸ್ಪತ್ರೆಗಳು ಕಾಯಿಲೆಗಳನ್ನು ಗುಣಪಡಿಸುತ್ತಿಲ್ಲ, ಬದಲಿಗೆ ನಿರ್ವಹಣೆ ಮಾಡುತ್ತಿವೆ. ಮಧುಮೇಹ ಎಂಬ ರೋಗವೇ ಇಂದು ಜಗತ್ತಿನಲ್ಲಿ 800 ಶತಕೋಟಿ ಡಾಲರ್ ಇನ್ಸುಲಿನ್ ವ್ಯವಹಾರವನ್ನು ನಿರ್ವಹಿಸುತ್ತಿದೆ, ಭಾರತದಲ್ಲೇ 200 ಶತಕೋಟಿ ಡಾಲರ್ ಈ ಇನ್ಸುಲಿನ್ಗಾಗಿಯೇ ವ್ಯಯಿಸಲಾಗುತ್ತಿದೆ. ಜಗತ್ತಿನ ಯಾವುದೇ ಹವಾಮಾನದಲ್ಲಿ, ಯಾವುದೇ ಕಾಲದಲ್ಲಿ ಬೆಳೆಯುವ ಸಿರಿಧಾನ್ಯಗಳನ್ನು ಬಳಸಿದರೆ ಮಧುಮೇಹ ಸಹಿತ ಹಲವು ದೀರ್ಘಕಾಲೀನ ರೋಗಗಳು ಸಂಪೂರ್ಣ ಗುಣಮುಖವಾಗುತ್ತವೆ’ ಎಂದು ಹೇಳಿದ ಡಾ.ಖಾದರ್, ತಮ್ಮ 30 ವರ್ಷಗಳ ಅನುಭವದಲ್ಲಿ ಹಲವು ರೋಗಿಗಳು ಗುಣಮುಖರಾಗಿದ್ದನ್ನು ಉದಾಹರಿಸಿದರು.

ಜೀತೊ ಟ್ರಸ್ಟ್ ಅಧ್ಯಕ್ಷ ಹಿತೇಶ್ ಬಗ್ರೇಚಾ ಪ್ರಾಸ್ತಾವಿಕ ಮಾತನಾಡಿದರು. ಟ್ರಸ್ಟಿ ಮನೋಜ್ ಕುಮಾರ್ ಜೈನ್ ಸಿರಿಧಾನ್ಯದ ಮಹತ್ವ ತಿಳಿಸಿದರು. ಪ್ರಿಯದರ್ಶಿನಿ ಹೋಟೆಲ್ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರಾವ್ ಅವರು ಸದ್ಯದ ಜಾಗತಿಕ ಯುದ್ಧದ ಸ್ಥಿತಿಯಲ್ಲಿ ಇಂಧನವನ್ನು ಮಿತವಾಗಿ ಬಳಸುವ ಮೂಲಕ ದೇಶಕ್ಕೆ ನಮ್ಮಿಂದಾದ ಕೊಡುಗೆ ನೀಡಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.