ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ | 1.82 ಕೆ.ಜಿ ಗಾಂಜಾ ಸಮೇತ ಮೂವರ ಬಂಧನ

Last Updated 6 ಜುಲೈ 2022, 12:55 IST
ಅಕ್ಷರ ಗಾತ್ರ

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಬಳಿ 1.82 ಕೆ.ಜಿ. ಗಾಂಜಾ ಸಮೇತ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಮಲಾಪುರದ ಬೊಮ್ಮರಾಜ್‌ ಹನುಮಂತಪ್ಪ (23), ಎನ್.ನರೇಶ ವೆಂಕಟೇಶ್‌ (21) ಹಾಗೂ ಮಂಜುನಾಥ ಗಾದೆಪ್ಪ (25) ಬಂಧಿತರು. ₹17 ಸಾವಿರ ಮೌಲ್ಯದ 1.82 ಕೆ.ಜಿ ಒಣಗಿದ ಗಾಂಜಾ, ಒಂದು ಬೈಕ್ ಹಾಗೂ ₹2,400 ನಗದು ವಶಪಡಿಸಿಕೊಂಡಿದ್ದಾರೆ.

ಹಂಪಿ ಪೊಲೀಸ್ ಠಾಣೆ ಸಿಪಿಐ ದೊಡ್ಡಣ್ಣ ನೇತೃತ್ವದಲ್ಲಿ ಕಮಲಾಪುರ ಪೊಲೀಸ್ ಠಾಣೆಯ ದತ್ತಾತ್ರೇಯ, ರಾಘವೇಂದ್ರ, ಮಹಮ್ಮದ್ ಶರೀಫ್, ಬೊಮ್ಮಗೌಡ, ಗಫೂರ್ ಸಾಬ್ ಹಾಗೂ ಹರೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT