ಹೊಸಪೇಟೆ (ವಿಜಯನಗರ): ಇಲ್ಲಿನ ಎಪಿಎಂಸಿ ಆವರಣದಲ್ಲಿ ರೈತರ ಅನುಕೂಲಕ್ಕಾಗಿ ತೆರೆದ ರಾಗಿ ಕೇಂದ್ರದಲ್ಲಿ ಕಮಿಷನ್ ಕೇಳಲಾಗುತ್ತಿದೆ ಎಂದು ಆರೋಪಿಸಿ, ರಾಗಿ ಖರೀದಿ ಕೇಂದ್ರದ ಎದುರು ರೈತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಸರ್ಕಾರ ರೈತರ ಅನುಕೂಲಕ್ಕಾಗಿ ರಾಗಿಗೆ ಕ್ವಿಂಟಲ್ಗೆ ₹4,886 ಬೆಂಬಲ ಬೆಲೆ ನಿಗದಿ ಮಾಡಿದೆ. 600 ಗ್ರಾಂ ಬಾಜು ತೆಗೆಯಬೇಕಾದ ನಿಯಮವಿದೆ. ಆದರೆ 3 ಕೆಜಿ ಬಾಜು ತೆಗೆಯಲಾಗುತ್ತದೆ ಎಂದು ರೈತರು ಆರೋಪಿಸಿದರು.

ತಾಲ್ಲೂಕಿನ ನಾಗಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡಾ ಗ್ರಾಮ, ನಾಗಾಲಪುರ, ಗೊಲ್ಲರಹಳ್ಳಿ, ಬ್ಯಾಲಕುಂದಿ, ಗರಗ ಸೇರಿದಂತೆ ನಾಲ್ಕೈದು ಹಳ್ಳಿಯ ರೈತರು ರಾಗಿ ಬೆಳೆ ಮಾರಾಟಕ್ಕೆ ಬಂದಿದ್ದರು. ಗ್ರೇಡರ್ಗೆ ಲಂಚ ಕೊಡದೆ ನಿಮ್ಮ ರಾಗಿ ಖರೀದಿ ಮಾಡಲ್ಲ ಎಂದು ಹೇಳಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. 10 ಟ್ರಾಕ್ಟರ್ಗಳಲ್ಲಿ 500ರಿಂದ 600 ಕ್ವಿಂಟಲ್ ರಾಗಿಯನ್ನು ರೈತರು ತಂದಿದ್ದರು.

ಸ್ಥಳಕ್ಕೆ ಭೇಟಿ ನೀಡಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರಿಯಾಜ್, ಯಾವುದೇ ರೀತಿಯಲ್ಲಿ ರೈತರಿಂದ ಹೆಚ್ಚಿನ ಬಾಜು ವಸೂಲಿ ಮಾಡಬಾರದು ಎಂದು ತಾಕೀತು ಮಾಡಿದರು. ರಾಗಿ ಕೇಂದ್ರ ಸಿಬ್ಬಂದಿ (ಗ್ರೇಡರ್) ಸ್ಥಳಾಂತರ ಮಾಡಲಾಗುವುದು ಎಂದು ಭರವಸೆ ನೀಡಿದ ಮೇಲೆ ರೈತರ ಪ್ರತಿಭಟನೆ ಕೊನೆಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.