ಹೊಸಪೇಟೆ: ನಗರದ ವಿಜಯನಗರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ (ಎನ್ಎಸ್ಎಸ್) ವತಿಯಿಂದ ಆಯೋಜಿಸಿದ ವಾರ್ಷಿಕ ಶಿಬಿರದ ನಾಲ್ಕನೇ ದಿನವಾದ ಗುರುವಾರ ಅಗ್ನಿಶಾಮಕ ದಳದಿಂದ ಅಣಕು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಅಗ್ನಿಶಾಮಕ ದಳ ಅಧಿಕಾರಿ ಯುವರಾಜ ಮತ್ತು ಬಲರಾಜ ಅವರು ವಿಪತ್ತು ನಿರ್ವಹಣೆಯನ್ನು ಕುರಿತು ವಿಶೇಷ ಉಪನ್ಯಾಸ ನೀಡಿದರು. ಯುವರಾಜ ಅವರು ಬೆಂಕಿಗಳ ವಿಧಗಳು ಯಾವುವು? ತುರ್ತು ಸಂದರ್ಭದಲ್ಲಿ ಅವುಗಳನ್ನು ನಂದಿಸಲು ಅನುಸರಿಸಬೇಕಾದ ತಂತ್ರಗಳು ಮತ್ತು ಮಾರ್ಗೋಪಾಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ನಂತರ ಬಾಲರಾಜ ಅವರು ಬೆಂಕಿ ನಂದಿಸುವ ವಿಧಗಳನ್ನು ಅಗ್ನಿಶಾಮಕ ದಳದವರ ಉಪಕರಣಗಳಿಂದ ತಿಳಿಸಿಕೊಟ್ಟರು.

ಬೆಂಕಿ ನಂದಿಸುವ ಸಂದರ್ಭದಲ್ಲಿ ಬಳಸುವ ಸಮವಸ್ತ್ರಗಳ ಕುರಿತು, ನೀರಿನಿಂದ ಉಂಟಾಗುವ ಸಮಸ್ಯೆಗಳಿಗೆ ಹೇಗೆ ಸ್ಪಂದಿಸಬೇಕು, ಕೆಲವು ಉರಗ ಮತ್ತು ಪ್ರಾಣಿಗಳಿಂದ ಜನರನ್ನು ಮತ್ತು ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬೇಕು ಮೊದಲಾದ ವಿಷಯಗಳನ್ನು ತಿಳಿಸಿಕೊಟ್ಟರು.

ಎನ್ಎಸ್ಎಸ್ ಘಟಕದ ಸಂಯೋಜಕ ಪ್ರೊ.ಗಾದೆಪ್ಪ, ಪ್ರೊ.ವಿರೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.