ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯನಗರ | ಜಿಲ್ಲೆಯಲ್ಲಿ ಒಟ್ಟು 1818 ಗಣೇಶ ಮೂರ್ತಿ ಪ್ರತಿಷ್ಠಾಪನೆ

Published : 6 ಸೆಪ್ಟೆಂಬರ್ 2024, 14:22 IST
Last Updated : 6 ಸೆಪ್ಟೆಂಬರ್ 2024, 14:22 IST
ಫಾಲೋ ಮಾಡಿ
Comments

ಹೊಸಪೇಟೆ(ವಿಜಯನಗರ): ಗೌರಿಗಣೇಶ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಶನಿವಾರ ಒಟ್ಟು 1818 ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ.

ಗಣೇಶ ವಿಗ್ರಹಗಳ ವಿಸರ್ಜನೆಗೆ ಒಟ್ಟು 402 ಸ್ಥಳಗಳಿದ್ದು, ಮೂರನೇ ದಿನ 1287 ಮೂರ್ತಿಗಳು ವಿಸರ್ಜನೆಯಾದರೆ, ಐದನೇ ದಿನ 429ಮೂರ್ತಿಗಳು ವಿಸರ್ಜನೆಯಾಗಲಿವೆ.

ಜಿಲ್ಲೆಯಾದ್ಯಂತ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಯು ಶಾಂತ ರೀತಿಯಿಂದ ನಡೆಯುಲು ಮುಂಜಾಗ್ರತ ಕ್ರಮವಾಗಿ ಬಂದೋಬಸ್ತ್ ಕರ್ತವ್ಯಕ್ಕಾಗಿ 4ಡಿವೈಎಸ್ಪಿ, 14ಸಿಪಿಐ, 35ಪಿಎಸ್‍ಐ, 92ಎಎಸ್‍ಐ, 768ಹೆಚ್.ಸಿ/ಪಿ.ಸಿ, 400ಗೃಹರಕ್ಷಕದಳ ಸಿಬ್ಬಂದಿ ಹಾಗೂ 5ಕೆಎಸ್‍ಆರ್‍ಪಿ ಮತ್ತು 5ಡಿಎಆರ್ ತುಕಡಿಯನ್ನು ನೇಮಿಸಲಾಗಿದೆ.

ಪೊಲೀಸರು ಮತ್ತು ಇತರೆ ಇಲಾಖೆಯವರು ನೀಡಿದ ಸಲಹೆ, ಸೂಚನೆಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟನಣೆಯಲ್ಲಿ ತಿಳಿಸಿದ್ದಾರೆ.

ಹೊಸಪೇಟೆಯಲ್ಲಿ ಶುಕ್ರವಾರ ಸಂಚಾರ ಪೊಲೀಸ್ ಅಧಿಕಾರಿಗಳು ವಿವಿಧ ಶಾಲಾಕಾಲೇಜುಗಳಿಗೆ ಭೇಟಿ ನಿಡಿ ವಾಹನದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವಾಗ ಸುರಕ್ಷೆ ಸುರಕ್ಷಿತ ವಾಹನ ಚಾಲನೆ ಮತ್ತು ರಸ್ತೆ ನಿಯಮ ಪಾಲಿಸುವಂತೆ ಆಡಳಿತ ಮಂಡಳಿ ಹಾಗೂ ವಾಹನಗಳ ಚಾಲಕರಿಗೆ ಸೂಚನೆ ನೀಡಿದರು.
ಹೊಸಪೇಟೆಯಲ್ಲಿ ಶುಕ್ರವಾರ ಸಂಚಾರ ಪೊಲೀಸ್ ಅಧಿಕಾರಿಗಳು ವಿವಿಧ ಶಾಲಾಕಾಲೇಜುಗಳಿಗೆ ಭೇಟಿ ನಿಡಿ ವಾಹನದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವಾಗ ಸುರಕ್ಷೆ ಸುರಕ್ಷಿತ ವಾಹನ ಚಾಲನೆ ಮತ್ತು ರಸ್ತೆ ನಿಯಮ ಪಾಲಿಸುವಂತೆ ಆಡಳಿತ ಮಂಡಳಿ ಹಾಗೂ ವಾಹನಗಳ ಚಾಲಕರಿಗೆ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT