ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ | ಗೌರಿ ಲಂಕೇಶ್‌ ನೆನಪಿನಲ್ಲಿ ಪ್ರತಿಭಟನೆ

Last Updated 5 ಸೆಪ್ಟೆಂಬರ್ 2022, 15:56 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಪ್ರಗತಿಪರ ಚಿಂತಕಿ ಗೌರಿ ಲಂಕೇಶ್‌ ಅವರ ಹತ್ಯೆ ಘಟನೆಯ ದಿನ (ಸೆ.5) ‘ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ’ ಕಾರ್ಯಕರ್ತರು ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಸೋಮವಾರ ರಾತ್ರಿ ಪ್ರತಿಭಟನೆ ನಡೆಸಿದರು.

ಗೌರಿ ನೆನಪಿನಲ್ಲಿ ಮೊಂಬತ್ತಿ ಬೆಳಗಿಸಿ, ಮೌನ ಆಚರಿಸಿದರು. ನಂತರ ಘೋಷಣೆಗಳನ್ನು ಕೂಗಿ, ಹತ್ಯೆ ಖಂಡಿಸಿದರು.
‘ದೇಶದಲ್ಲಿ ಪ್ರಭುತ್ವದ ವಿರುದ್ಧ, ಮನುವಾದಿ ಸಿದ್ಧಾಂತದ ವಿರುದ್ಧ ಧ್ವನಿಯೆತ್ತುವವರನ್ನು ಗುರಿಯಾಗಿಸಿಕೊಂಡು ಜೈಲಿಗಟ್ಟುವುದು, ಹತ್ಯೆಗೈಯುವ ಮೂಲಕ ಆರ್‌.ಎಸ್‌.ಎಸ್ ಭಯೋತ್ಪಾದನೆ ಮಾಡುತ್ತಿದೆ. ಇವರ ಭಯೋತ್ಪಾದನೆಗೆ ದಾಭೋಲ್ಕರ್‌, ಪನ್ಸಾರೆ, ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್ ಅಂಥ ಚಿಂತಕರು ಹತ್ಯೆಗೀಡಾದರು. ಅವರ ಜೀವ ಹೋಗಿದೆ ಹೊರತು ಅವರು ಸಿದ್ದಾಂತಗಳು ಇಂದೂ ಅಚ್ಚಳಿಯದೇ ನಮ್ಮ ನಡುವೆ ಉಳಿದಿವೆ’ ಎಂದು ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಗೌಸ್ ಹೇಳಿದರು.

ಸಂಘಟನೆಯ ಜಿಲ್ಲಾ ಅಧ್ಯಕ್ಷ ಸೊಹೇಲ್, ಕೋಶಾಧಿಕಾರಿ ಯೂಸುಫ್ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT