ಕೂಡ್ಲಿಗಿ: ಮನೆಯ ಪಾಯ ತೆಗೆಯುವಾಗ ಸಿಕ್ಕ ಬಂಗಾರದ ಅಭರಣಗಳನ್ನು ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ₹30 ಲಕ್ಷ ಕಿತ್ತುಕೊಂಡು ಹೋಗಿದ್ದ ಇಬ್ಬರು ಆರೋಪಿಗಳನ್ನು ಹೊಸಹಳ್ಳಿ ಪೊಲೀಸರು ಶನಿವಾರ ಬಂಧಿಸಿದ್ದು, ಅವರಿಂದ ₹29.50 ಲಕ್ಷ ವಶಪಡಿಸಿಕೊಂಡಿದ್ದಾರೆ.

ತಾಲ್ಲೂಕಿನ ಲಿಂಗನಹಳ್ಳಿ ಕೊರಚರಹಟ್ಟಿ ಗ್ರಾಮದ ಸುರೇಶ್ ಹಾಗೂ ಸೋಮಣ್ಣ ಬಂದಿತರು.

ಈ ಇಬ್ಬರು ಕಳೆದ ಜನವರಿ 28ರಂದು ತಮ್ಮ ಮನೆಯ ಪಾಯ ತೆಗೆಯುವಾಗ ಸುಮಾರು ಒಂದು ಕೆ.ಜಿ. ಬಂಗಾರದ ಆಭರಣಗಳು ಸಿಕ್ಕಿದ್ದು, ಅವುಗಳನ್ನು ಮಾರುಕಟ್ಟೆಯ ಬೆಲೆಗಿಂತ ಕಡಿಮೆ ಬೆಲೆಗೆ ಕೊಡುವುದಾಗಿ ಚನ್ನೈ ಮೂಲದ ಜಿ.ಕುಮಾರ್ ಎಂಬುವವರಿಗೆ ತಿಳಿಸಿದ್ದರು. ತಾಲ್ಲೂಕಿನ ಕ್ಯಾಸನಕೆರೆ ಗ್ರಾಮದ ಆರಣ್ಯ ಪ್ರದೇಶಕ್ಕೆ ಕುಮಾರ್ ಅವರನ್ನು ಕರೆಸಿಕೊಂಡು ಅವರ ಬಳಿ ಇದ್ದ ₹30 ಲಕ್ಷ ಕಿತ್ತುಕೊಂಡು ಹೋಗಿದ್ದರು.

ಈ ಕುರಿತು ಮಾರ್ಚ್ 14ರಂದು ಕುಮಾರ್ ಅವರು ಹೊಸಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದರು. ಎಸ್ಪಿ ಎಸ್.ಜಾಹ್ನವಿ, ಎಎಸ್ಪಿ ಜಿ.ಮಂಜುನಾಥ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಅವರ ಮಾರ್ಗದರ್ಶನದಲ್ಲಿ ತಕ್ಷಣ ಕಾರ್ಯಾಚರಣೆ ನಡೆಸಿದ ಕೊಟ್ಟೂರು ಸಿಪಿಐ ಡಿ.ದುರುಗಪ್ಪ ಮತ್ತು ಹೊಸಹಳ್ಳಿ ಪಿಎಸೈ ಸಿದ್ರಾಮ ಬಿದರಾಣಿ ಅವರು ಆರೋಪಿಗಳನ್ನು ಪತ್ತೆ ಹಚ್ಚಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಹೊಸಹಳ್ಳಿ ಠಾಣೆಯ ಸಿಬ್ಬಂದಿ ಅಂಜನಮೂರ್ತಿ, ಎನ್.ಎಂ. ಸ್ವಾಮಿ, ಕೊಟ್ರೇಶ್, ವಿಜಯಕುಮಾರ್ ಬಿ.ಎಸ್. ಮಂಜುನಾಥ ಬಿ.ಎಸ್., ಸುರೇಶ್ ಯು., ಕೊಟ್ರೇಶ್ ಅಂಗಡಿ, ಸಿದ್ದಲಿಂಗಪ್ಪ ಕೆ., ಸಂದೀಪ್ ಎಂ., ಬಿಳಿಚೋಡು ಮಾಲತೇಶ್, ಕೃಷ್ಣನಾಯ್ಕ್, ಗೌಡ್ರ ರವಿಚಂದ್ರ, ಕುಮಾರ್ ನಾಯ್ಕ್ ಅವರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

ಪೊಲೀಸರ ಕಾರ್ಯವನ್ನು ಎಸ್ಪಿ ಎಸ್.ಜಾಹ್ನವಿ ಪ್ರಶಂಸಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.