ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಮಾಲವಿ ಜಲಾಶಯಕ್ಕೆ ₹ 4.02ಕೋಟಿ ಅನುದಾನ ಕ್ರೆಸ್ಟ್ ಗೇಟ್ ಗಳನ್ನು ಅಳ ವಡಿಸುವ ಕಾಮಗಾರಿ ಮುಗಿದಿದೆ ಎಂದು ಶಾಸಕ ಕೆ.ನೇಮರಾಜನಾಯ್ಕ ಹೇಳಿದರು.

ತಾಲ್ಲೂಕಿನ ಮಾಲವಿ ಜಲಾಶಯದಕ್ಕೆ ಮಂಗಳವಾರ ಭೇಟಿ ನೀಡಿ ಕ್ರೆಸ್ಟ್ ಗೇಟ್ಗಳನ್ನು ಅಳವಡಿಸಿದ ಕಾಮಗಾರಿ ವೀಕ್ಷಿಸಿ ಮಾತನಾಡಿದರು.

ಜಲಾಶಯದ ಎಡ ಮತ್ತು ಬಲದಂಡೆ ಕಾಲುವೆ ದುರಸ್ತಿಗೊಳಿಸಲಾಗುವುದು, ಮುಂಗಾರು ಆರಂಭಗೊಳ್ಳುವ ಮುನ್ನವೇ ಕಾಮಗಾರಿ ಮುಗಿದಿದೆ. ಸಣ್ಣ ಪುಟ್ಟ ಕೆಲಸಗಳಷ್ಟೆ ಬಾಕಿ ಇವೆ, ವಾರ ದೊಳಗೆ ಪೂರ್ಣಗೊಳಿಸುವುದಾಗಿ ಗುತ್ತಿಗೆ ದಾರರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಕಾಮಗಾರಿ ವಿಳಂಬಗೊಂಡಿದ್ದಕ್ಕೆ ಗುತ್ತಿಗೆದಾರರನ್ನು ದೂರವಾಣಿಯಲ್ಲಿ ತರಾಟೆಗೆ ತೆಗೆದುಕೊಂಡ ಶಾಸಕರು, ಕಾಲುವೆಗಳಿಗೆ ಅಗತ್ಯವಾದ ಯಂತ್ರಗಳನ್ನು ವೇಗವಾಗಿ ಅಳವಡಿಸಿ ಎಂದು ತಾಕೀತು ಮಾಡಿದರು.

ಕಾಮಗಾರಿಗೆ ಅಗತ್ಯವಿರುವ ಕ್ರೇನ್ಗಳನ್ನು ನೀಡುವಂತೆ ಸ್ಥಳದಲ್ಲಿದ್ದ ಮಾರುತಿ ಅವರಿಗೆ ಸೂಚಿಸಿದರು.

ಎಲ್ಲ ಕಾಮಗಾರಿ ಪೂರ್ಣಗೊಂಡ ಬಳಿಕವೇ ಬಿಲ್ ಮಾಡುವಂತೆ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್ ಧರ್ಮರಾಜ್ ಅವರಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ನವೀಕೃತ ಗೊಂಡ ಕ್ರೆಸ್ಟ್ ಗೇಟ್ ಕಾರ್ಯಕ್ಷಮತೆ ಪರೀಕ್ಷಿಸಲಾಯಿತು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಾದಾಮಿ ಮೃತ್ಯುಂಜಯ, ತಾಲ್ಲೂಕು ಘಟಕದ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಜಿಲ್ಲಾ ಉಪಾಧ್ಯಕ್ಷ ನಾಣ್ಯಾಪುರ ಕೃಷ್ಣ ಮೂರ್ತಿ, ಪುರಸಭೆ ಸದಸ್ಯ ನಾಗರಾಜ ಜನ್ನು, ಜಿ.ಎಂ.ಜಗದೀಶ್, ಪಿಡಿಒ ಶ್ರೀಕಾಂತ್, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಅಡೂರ್ ಶಿವಕುಮಾರ್, ನರೇಗಲ್ಲು ಬಸವರಾಜ, ಹೋಟೆಲ್ ಸಿದ್ದರಾಜು, ಸುರೇಶ್ ಇದ್ದರು.

ಡಿವೈಎಸ್ಪಿ ಅಕ್ರಮ ದಂಧೆಗಳಿಗೆ ರಕ್ಷಣೆ: ಆರೋಪ

ಹಗರಿಬೊಮ್ಮನಹಳ್ಳಿ: ಕೂಡ್ಲಿಗಿ ಡಿವೈಎಸ್ಪಿ ಅವರು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುವ ಅಕ್ರಮ ದಂಧೆಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಶಾಸಕ ಕೆ.ನೇಮರಾಜನಾಯ್ಕ ಗಂಭೀರ ಆರೋಪ ಮಾಡಿದರು.

ತಾಲ್ಲೂಕಿನ ಮಾಲವಿ ಜಲಾಶಯದ ಬಳಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾಜಿ ಶಾಸಕ ಎಲ್.ಬಿ.ಪಿ.ಭೀಮನಾಯ್ಕ ಅವರ ಸಂಬಂಧಿಯಾಗಿದ್ದಾರೆ, ಜೂಜಾಟ, ಮಟ್ಕಾ ಸೇರಿದಂತೆ ಐಪಿಎಲ್ ಹಲವು ಅಕ್ರಮ ದಂಧೆಗಳು ರಾಜಾರೋಷವಾಗಿ ನಡೆಯುತ್ತಿದ್ದರೂ ಡಿವೈಎಸ್ಪಿ ಏನೂ ನಡೆದಿಲ್ಲ ಎನ್ನುವಂತೆ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ ಎಂದರು.

ಈಚೆಗೆ ಬಂಗಾರದ ಅಂಗಡಿ ಮಾಲೀಕರೊಬ್ಬರನ್ನು ಪ್ರಕರಣ ದಾಖ ಲಿಸುವುದಾಗಿ ಹೆದರಿಸಿ ಪಟ್ಟಣದ ಪಿಎಸ್ಐ ಬಸವರಾಜ ಅಡವಿಬಾವಿ ಮತ್ತು ಮೂರು ಜನ ಹೆಡ್ ಕಾನ್ಸ್ಟೇಬಲ್ಗಳು ಬೆಣ್ಣೆಕಲ್ಲು ಅರಣ್ಯ ಪ್ರದೇಶದಲ್ಲಿ ದುಡ್ಡು ವಸೂಲಿ ಮಾಡಿದ್ದಾರೆ, ಇಲ್ಲಿನ ಅಕ್ರಮ ಚಟುವಟಿಕೆಗಳು ಮತ್ತು ಈ ಘಟನೆಯ ಕುರಿತಂತೆ ಬೆಂಗಳೂರಿನ ಡಿಐಜಿ ಅವರಿಗೆ ದೂರು ನೀಡುವುದಾಗಿ ಹೇಳಿದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಾದಾಮಿ ಮೃತ್ಯುಂಜಯ, ತಾಲ್ಲೂಕು ಘಟಕದ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಜಿ.ಎಂ.ಜಗದೀಶ, ನರೇಗಲ್ಲು ಬಸವರಾಜ, ಹೋಟೆಲ್ ಸಿದ್ದರಾಜು, ನಾಣ್ಯಾಪುರ ಕೃಷ್ಣಮೂರ್ತಿ, ಚಿತ್ತವಾಡಿಗಿ ಪ್ರಕಾಶ್, ಶಿವಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-25-626905763

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.