ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಪಿಂಜಾರ್ ಹೆಗ್ಡಾಳ್ ಗ್ರಾಮದ ಹೊರ ವಲಯದ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ಕೆಕೆಆರ್ಟಿಸಿ ಬಸ್ ಮರಕ್ಕೆ ಡಿಕ್ಕಿ ಹೊಡೆದಿದ್ದು, ಚಾಲಕ, ನಿರ್ವಾಹಕರಿಗೆ ಸಣ್ಣಪುಟ್ಟ ಗಾಯವಾಗಿದ್ದು ಬಿಟ್ಟರೆ ಉಳಿದ 16 ಮಂದಿ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ.

ಬಸ್ನ ಪ್ಲೇಟ್ ತುಂಡಾಗಿ ಬಸ್ ರಸ್ತೆ ಬದಿಯ ತಗ್ಗಿಗೆ ಇಳಿದಿತ್ತು. ತಕ್ಷಣ ಚಾಲಕ ಶಂಕರಲಿಂಗ ಅವರು ಸಮಯಪ್ರಜ್ಞೆ ಬಳಸಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆಸಿದ್ದರಿಂದ ದೊಡ್ಡ ಅಪಾಯ ತಪ್ಪಿತು ಎಂದು ಬಸ್ನಲ್ಲಿದ್ದ ಪ್ರಯಾಣಿಕರನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ.

ಹಗರಿಬೊಮ್ಮನಹಳ್ಳಿ ಘಟಕದ ಬಸ್ ಪಟ್ಟಣದಿಂದ ರಾಯಚೂರಿಗೆ ಹೊರಟಿತ್ತು,16 ಜನ ಪ್ರಯಾಣಿಕರಿದ್ದರು. ಬಸ್ಸನ್ನು ಮರಕ್ಕೆ ಡಿಕ್ಕಿ ಹೊಡೆಸದೆ ಬಿಟ್ಟಿದ್ದರೆ ಅದು ಮಗುಚಿ ಬೀಳುವ ಸಾಧ್ಯತೆ ಇತ್ತು ಎಂದು ಹೇಳಲಾಗಿದೆ.

‘ಚಾಲಕ ಶಂಕರಲಿಂಗ ಮತ್ತು ನಿರ್ವಾಹಕ ಹನುಮಂತಪ್ಪ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ, ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಪ್ರಯಾಣಿಕರನ್ನು ಬೇರೆ ಬಸ್ ನಲ್ಲಿ ಕಳುಹಿಸಲಾಯಿತು’ ಎಂದು ಡಿಪೋ ಅಧಿಕಾರಿ ಕೆ.ಸಂತೋಷ್ ಕುಮಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.