ಹೊಸಪೇಟೆ (ವಿಜಯನಗರ): ಹಂಪಿಯ ವಿರೂಪಾಕ್ಷ ದೇವಸ್ಥಾನದ ಸ್ನಾನಘಟ್ಟದಲ್ಲಿ ಬುಧವಾರ ಹುಬ್ಬಳ್ಳಿಯ ಬಾಲಕ ಹರೀಶ್ ಎಂಬಾತ ನೀರಲ್ಲಿ ಮುಳುಗಿ ಮೃತಪಟ್ಟಿದ್ದು, ಸ್ನಾನಘಟ್ಟದಲ್ಲಿನ ಸುರಕ್ಷತಾ ಕ್ರಮಗಳ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಎದುರಾಗಿದೆ.

ಎಲ್ಲ ತೀರ್ಥಕ್ಷೇತ್ರಗಳು, ಪ್ರವಾಸಿ ತಾಣಗಳಲ್ಲಿ ಸ್ನಾನಘಟ್ಟ, ಕೆರೆ, ಪುಷ್ಕರಿಣಿಗಳಲ್ಲಿ ನಿರ್ದಿಷ್ಟ ಸ್ಥಳದಿಂದ ದೂರಕ್ಕೆ ಹೋಗಬಾರದು ಎಂದು ತಿಳಿಸಲು ತಡೆಬೇಲಿ ಹಾಕಲಾಗಿರುತ್ತದೆ. ಕನಿಷ್ಠ ಪಕ್ಷ ಹಗ್ಗವನ್ನು ಕಟ್ಟಿ, ಮುಂದಕ್ಕೆ ಹೋಗಬಾರದು ಎಂಬ ಸೂಚನೆ ನೀಡಲಾಗಿರುತ್ತದೆ. ಆದರೆ ಸಾವಿರಾರು ಭಕ್ತರು ಸ್ನಾನ ಮಾಡುವ ಹಂಪಿಯಲ್ಲಿ ಆ ವ್ಯವಸ್ಥೆಯನ್ನು ಇದುವರೆಗೂ ಮಾಡಿಲ್ಲ.

ತುಂಗಭದ್ರಾ ಅಣೆಕಟ್ಟೆಯ ಕ್ರೆಸ್ಟ್ಗೇಟ್ ಸಂಪೂರ್ಣ ತೆರೆದಾಗ ಬಹುತೇಕ ಸ್ನಾನಘಟ್ಟ ಮುಳುಗುವಷ್ಟು ಎತ್ತರಕ್ಕೆ ನೀರು ಹರಿದಿರುತ್ತದೆ. ಸದ್ಯ ಬಿರುಬೇಸಿಗೆ ಕಾಲವಾಗಿದ್ದು, ಬಹಳ ಕಡಿಮೆ ಪ್ರಮಾಣದಲ್ಲಿ ನದಿಯಲ್ಲಿ ನೀರು ಹರಿಯುತ್ತಿದೆ. ಹೀಗಿದ್ದರೂ ಇಲ್ಲೊಂದು ಸಾವು ಸಂಭವಿಸಿದೆ.

ಬಿರು ಬೇಸಿಗೆಯ ಏಪ್ರಿಲ್, ಮೇ ತಿಂಗಳಲ್ಲಿ ಇಲ್ಲಿನ ಸ್ನಾನಘಟ್ಟದಲ್ಲಿ ನೀರಲ್ಲಿ ಮುಳುಗಿ ಸಾವು ಸಂಭವಿಸಿದ್ದು ಬಹಳ ವಿರಳ, ಆದರೂ ನೀರಿನ ಸೆಳೆತ, ಹರಿವು ಕಡಿಮೆ ಇದ್ದರೂ ಹೊಂಡದಲ್ಲಿ ನೀರು ಆಳವಾಗಿದೆ. ಹೀಗಾಗಿ ಈಜು ಬಾರದವರು ಮುಂದೆ ಹೋಗಬಾರದು ಎಂಬುದನ್ನು ತಿಳಿಸಲು ತಡೆಬೇಲಿ ಹಾಕುವ ಅಥವಾ ಹಗ್ಗ ಕಟ್ಟಿ ಎಚ್ಚರಿಕೆ ನೀಡುವ ಕೆಲಸ ಆಗಬೇಕಿತ್ತು ಎಂದು ಪ್ರವಾಸಿ ಮಾರ್ಗದರ್ಶಿಗಳು ಹೇಳಿದರು.

ಯಾರ ಕೆಲಸ?: ಸ್ನಾನಘಟ್ಟದ ಸಂಪೂರ್ಣ ಸುರಕ್ಷತೆ, ಸ್ವಚ್ಛತೆ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದೆ ಎಂದು ಹಂಪಿ ಗ್ರಾಮ ಪಂಚಾಯಿತಿ ಹೇಳುತ್ತಿದೆ. ಆದರೆ ಅದು ನಮಗೆ ಸೇರಿದ್ದಲ್ಲ, ನಮ್ಮದೇನಿದ್ದರೂ ವಿರೂಪಾಕ್ಷ ದೇವಸ್ಥಾನದ ಪೂಜೆ, ಪುನಸ್ಕಾರಗಳಿಗೆ ಸಂಬಂಧಿಸಿದ ವಿಷಯ ಮಾತ್ರ ಎಂದು ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿ ಹಾಗೂ ದೇವಸ್ಥಾನದ ಆಡಳಿತಾಧಿಕಾರಿ ಆಂಜನೇಯ ಪ್ರತಿಕ್ರಿಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-25-1598282061

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.