ಹೊಸಪೇಟೆ (ವಿಜಯನಗರ): ಹಂಪಿಯ ಕೋದಂಡರಾಮ, ಯಂತ್ರೋದ್ಧಾರಕ ಆಂಜನೇಯ ದೇವಸ್ಥಾನದ ಬಳಿಯ ಚಕ್ರತೀರ್ಥದಲ್ಲಿ ನಡೆಯುತ್ತಿರುವ ಹರಿಗೋಲು (ತೆಪ್ಪ) ಸವಾರಿ ವಿವಾದ ಮತ್ತೊಮ್ಮೆ ಭುಗಿಲೆದ್ದಿದ್ದು, ಟೆಂಡರ್ ಷರತ್ತುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂಬ ದೂರನ್ನು ಬುಕ್ಕಸಾಗರ ಗ್ರಾಮ ಪಂಚಾಯಿತಿಗೆ ಸಲ್ಲಿಸಲಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆಯ (ಟಿ.ಎ.ನಾರಾಯಣ ಗೌಡ ಬಣ) ಜಿಲ್ಲಾ ಘಟಕದ ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ ಅವರು ಟೆಂಡರ್ ಷರತ್ತು ಉಲ್ಲಂಘಿಸಿ, ತೆಪ್ಪ ಸವಾರಿ ನಡೆಯುತ್ತಿದೆ, ಚಕ್ರತೀರ್ಥದಲ್ಲಿ ಯಾಂತ್ರೀಕೃತ ದೋಣಿಯಲ್ಲಿ ಜನರನ್ನು ಒಂದು ದಡದಿಂದ ಇನ್ನೊಂದು ಕಡೆಗೆ ಸಾಗಿಸುವ ಕೆಲಸವನ್ನಷ್ಟೇ ಮಾಡಬೇಕು ಎಂಬ ಷರತ್ತು ಉಲ್ಲಂಘನೆಯಾಗಿದೆ, ತಕ್ಷಣ ಟೆಂಡರ್ ರದ್ದುಪಡಿಸಿ ಎಂದು ಕೋರಿ ಈ ಮನವಿ ಸಲ್ಲಿಸಿದ್ದಾರೆ.

ಜತೆಗೆ ಸ್ಥಳದಲ್ಲಿ ಅಳವಡಿಸಿರುವ ದರಪಟ್ಟಿಯ ಬದಲಿಗೆ (ಯಾಂತ್ರೀಕೃತ ದೋಣಿಯಲ್ಲಿ ಸಾಗಲು ವಯಸ್ಕರಿಗೆ ₹100, ಮಕ್ಕಳಿಗೆ ₹50) ಬೇಕಾಬಿಟ್ಟಿ ಹಣ ವಸೂಲಿ ಮಾಡಲಾಗುತ್ತಿದೆ, ಇದನ್ನು ಸಹ ಗಮನಿಸಬೇಕು ಎಂದೂ ದೂರಿನಲ್ಲಿ ತಿಳಿಸಿದ್ದಾರೆ.

‘ನಾನು ಗ್ರಾಮ ಪಂಚಾಯಿತಿಗೆ ಮಾತ್ರ ದೂರು ನೀಡಿದ್ದಲ್ಲ, ತಾಲ್ಲೂಕು ಪಂಚಾಯಿತಿ ಇಒ, ಜಿಲ್ಲಾಧಿಕಾರಿ ಅವರಿಗೂ ದೂರು ಸಲ್ಲಿಸಿದ್ದೇನೆ. ಟೆಂಡರ್ನಲ್ಲಿ ನಮ್ಮ ಗುಂಪಿನವರಿಗೆ ಅವಕಾಶ ಸಿಕ್ಕಿಲ್ಲ ಎಂಬ ಕಾರಣಕ್ಕೆ ಈ ದೂರು ನೀಡಿದ್ದಲ್ಲ, ತೆಪ್ಪದಲ್ಲಿ ಸವಾರಿ ಮಾಡುವಾಗ ಅಪಘಡವಾಗಿ ಹಂಪಿಗೆ ಕೆಟ್ಟ ಹೆಸರು ಬಂದರೆ ಯಾರು ಹೊಣೆ ಎಂದು ಪ್ರಶ್ನಿಸಿ ನಾನು ಈ ದೂರು ನೀಡಿದ್ದೇನೆ, ತಕ್ಷಣ ಸ್ಥಳೀಯಾಡಳಿತ, ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು’ ಎಂದು ತಾರಿಹಳ್ಳಿ ಹನುಮಂತಪ್ಪ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-25-937005689

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.