ಹೊಸಪೇಟೆ (ವಿಜಯನಗರ): ಅತ್ಯಂತ ಶಕ್ತಿಶಾಲಿ ಮತ್ತು ರೋಚಕ ಕಾಲ್ಪನಿಕ ಪ್ರಾಣಿ ‘ಯಾಳಿ’ ಎಂದೂ ಕರೆಯಲಾಗುವ ಎರಡು ಅಡಿ ಎತ್ತರದ ವ್ಯಾಳದ ಕಲ್ಲಿನ ಕೆತ್ತನೆಯು ಹಂಪಿಯ ಹಜಾರರಾಮ ದೇವಸ್ಥಾನದ ಆವರಣದಲ್ಲಿ ಪತ್ತೆಯಾಗಿದೆ.

ಜತೆಗೆ ಆಳ್ವಾರ್ರ ಮತ್ತೆರಡು ಭಗ್ನ ವಿಗ್ರಹಗಳು, 23 ಮೀಟರ್ ಉದ್ದದ ಚರಂಡಿ ಪತ್ತೆಯಾಗಿದೆ. ಚಪ್ಪಡಿಕಲ್ಲು ಹಾಸುವ ಕಾಮಗಾರಿಗಾಗಿ ಮಣ್ಣನ್ನು ಅಗೆಯುತ್ತಿದ್ದಾಗ ಇವು ಪತ್ತೆಯಾಗಿವೆ.

‘ಹಜಾರರಾಮ ದೇವಸ್ಥಾನದ ಭಿತ್ತಿಚಿತ್ರಗಳ ರೂಪದಲ್ಲಿ ಮಾತ್ರ ವ್ಯಾಳಗಳು ಇರುವುದಲ್ಲ, ಇಲ್ಲಿ ವ್ಯಾಳದ ಕೆತ್ತನೆ ನಡೆದು ಮಹಾದ್ವಾರದಲ್ಲಿ ಇಡಲಾಗಿತ್ತು ಎಂಬುದಕ್ಕೆ ಇದು ಸಾಕ್ಷಿ’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್ಐ) ಅಧೀಕ್ಷಕ ಕೆ.ರಾಮಕೃಷ್ಣ ರೆಡ್ಡಿ ತಿಳಿಸಿದರು.

‘ಆಳ್ವಾರ್ರ ಭಗ್ನಗೊಂಡ ಎರಡು ವಿಗ್ರಹಗಳು ನಾಲ್ಕು ದಿನಗಳ ಹಿಂದೆ ಪತ್ತೆಯಾಗಿದ್ದವು. ಇದೀಗ ಮತ್ತೆರಡು ವಿಗ್ರಹಗಳು ಪತ್ತೆಯಾಗಿವೆ. ಜತೆಗೆ 23 ಮೀಟರ್ ಉದ್ದದ ಕಲ್ಲಿನ ಚರಂಡಿ ಕಾಣಿಸಿದೆ. ವಿಜಯನಗರ ಕಾಲದಲ್ಲಿ ನೀರು ಹರಿದುಹೋಗಲು ಎಂತಹ ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂಬುದಕ್ಕೆ ಸಾಕ್ಷಿಯಾಗುತ್ತಿದೆ’ ಎಂದು ತಿಳಿಸಿದರು.

ಕಿರುಗಾಲುವೆ?: ‘ಇದು ಚರಂಡಿ ಆಗಿರುವ ಸಾಧ್ಯತೆ ಇಲ್ಲ, ಬದಲಿಗೆ ರಾಣಿ ಸ್ನಾನಗೃಹದಿಂದ ಮಹಾನವಮಿ ದಿಬ್ಬದ ಮೂಲಕ ಬರುತ್ತಿದ್ದ ನೀರಿನ ಹರಿವಿಗೆ ನಿರ್ಮಿಸಲಾಗಿದ್ದ ಕಿರುಗಾಲುವೆ ಇರಬಹುದು‘ ಎಂದು ಪ್ರವಾಸಿ ಮಾರ್ಗದರ್ಶಿ ವಿರೂಪಾಕ್ಷಿ ವಿ.ಹಂಪಿ ಅಭಿಪ್ರಾಯಪಟ್ಟಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-51-1442786695

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.