ಹೊಸಪೇಟೆ (ವಿಜಯನಗರ): ಹಂಪಿ ಸುತ್ತಮುತ್ತ ಕಾರ್ಯಾಚರಿಸುತ್ತಿರುವ ಹೋಂ ಸ್ಟೇಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಸಬೇಕು ಎಂಬ ಕಟ್ಟುನಿಟ್ಟಿನ ಸೂಚನೆ ಪಾಲನೆಯಾಗಿದೆಯೇ ಎಂಬುದನ್ನು ಸೋಮವಾರ ಎಸ್ಪಿ ಎಸ್.ಜಾಹ್ನವಿ ನೇತೃತ್ವದಲ್ಲಿ ಪರಿಶೀಲನೆ ಕಾರ್ಯ ನಡೆಯಿತು.

ಹಂಪಿ ಗ್ರಾಮ ಪಂಚಾಯಿತಿ ಬಳಿ ಇರುವ ಐದು ಹೋಂ ಸ್ಟೇಗಳಿಗೆ ಭೇಟಿ ನೀಡಿದ ಎಸ್ಪಿ ಜಾಹ್ನವಿ, ‘ಹವಾಮ’ ಆಯುಕ್ತ ರಮೇಶ್ ವಟಗಲ್, ತಹಶೀಲ್ದಾರ್ ಶ್ರುತಿ ಎಂ.ಎಂ., ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ, ಪ್ರಭಾರ ಉಪನಿರ್ದೇಶಕ ಡಿ.ನಾಗರಾಜ್ ಅವರು ಹೋಂ ಸ್ಟೇ ನಡೆಸಲು ಕಡ್ಡಾಯವಾಗಿ ನೋಂದಣಿ ಮಾಡಲು ಸೂಚಿಸಿದರು.

ಇನ್ನು ಮುಂದೆ ನೋಂದಣಿ ಮಾಡುವುದಾಗಿ ಭರವಸೆ ನೀಡಿದ ಮೇರೆಗೆ ಅಧಿಕಾರಿಗಳು ಸ್ಥಳದಿಂದ ನಿರ್ಗಮಿಸಿದರು. ನೋಂದಣಿ ಮಾಡಿಸುವ ತನಕ ಹೋಂ ಸ್ಟೇಗಳನ್ನು ತೆರೆಯಬಾರದು ಎಂಬ ಮೌಖಿಕ ಎಚ್ಚರಿಕೆಯನ್ನು ಈ ಐದು ಹೋಂ ಸ್ಟೇಗಳ ಮಾಲೀಕರಿಗೆ ನೀಡಲಾಯಿತು.

132 ಅನಧಿಕೃತ ಹೋಂ ಸ್ಟೇಗಳು: ಇಡೀ ವಿಜಯನಗರ ಜಿಲ್ಲೆಯಲ್ಲಿ ನೋಂದಾಯಿತ ಹೋಂ ಸ್ಟೇ ಇರುವುದು ಕೇವಲ ಒಂದು. ಅದು ಇರುವುದು ಹೊಸಪೇಟೆಯಲ್ಲಿ. ಉಳಿದಂತೆ ಹಂಪಿ ಸುತ್ತಮುತ್ತ ಇರುವ ಸುಮಾರು 132ರಷ್ಟು ಹೋಂ ಸ್ಟೇಗಳು ಇದುವರೆಗೆ ನೋಂದಣಿ ಮಾಡಿಕೊಂಡಿಲ್ಲ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-25-834300637

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.