ಹೊಸಪೇಟೆ (ವಿಜಯನಗರ): ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನ ಆವರಣದಲ್ಲಿನ ಕುಮಾರಸ್ವಾಮಿ ದೇವಸ್ಥಾನವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್ಐ) ಸೂಚನೆ ಮೇರೆಗೆ ಮುಜರಾಯಿ ಇಲಾಖೆಯು ಭಕ್ತರಿಗೆ ಮುಕ್ತಗೊಳಿಸಿದೆ.

ವಿರೂಪಾಕ್ಷನ ದರ್ಶನ ನಡೆಯಲು ಈ ಗೋಪುರ ದಾಟಿಯೇ ಹೋಗಬೇಕಿದೆ. ಎಡಕ್ಕೆ ವರದ ವಿನಾಯಕ ದೇವಸ್ಥಾನ, ಬಲಕ್ಕೆ ಕುಮಾರಸ್ವಾಮಿ ದೇವಸ್ಥಾನಗಳಿವೆ. ಈ ಎರಡೂ ದೇವರ ದರ್ಶನ ಮಾಡಿಯೇ ಭಕ್ತರು ಮುಂದಕ್ಕೆ ಸಾಗಬೇಕಿದೆ. ಆದರೆ ಕಳೆದ 15ಕ್ಕೂ ಅಧಿಕ ವರ್ಷಗಳಿಂದ ಈ ಎರಡೂ ಗುಡಿಗಳ ದರ್ಶನಕ್ಕೆ ಅವಕಾಶ ಇಲ್ಲವಾಗಿತ್ತು. ಎರಡೂ ಗುಡಿಗಳು ಒಂದು ರೀತಿಯಲ್ಲಿ ಗೋದಾಮಿನ ರೀತಿ ಬಳಕೆಯಾಗಿತ್ತು.

ಗಣೇಶ ಗುಡಿ ಮತ್ತು ಕುಮಾರಸ್ವಾಮಿ ಗುಡಿಗಳನ್ನು ಭಕ್ತರಿಗೆ ಮುಕ್ತಗೊಳಿಸಬೇಕು ಎಂಬ ಬೇಡಿಕೆ ಬಹಳ ವರ್ಷಗಳಿಂದ ಇತ್ತು. ಇದೀಗ ಎಎಸ್ಐ ಅಧೀಕ್ಷಕ ಕೆ.ರಾಮಕೃಷ್ಣ ರೆಡ್ಡಿ ಅವರು ಈ ಕೋರಿಕೆಗೆ ಮನ್ನಣೆ ಸೂಚಿಸಿದ್ದು, ಕುಮಾರಸ್ವಾಮಿ ಗುಡಿ ಇದೀಗ ಭಕ್ತರಿಗೆ ಮುಕ್ತವಾಗಿದೆ. ಆದರೆ ವರದ ವಿನಾಯಕ ಗುಡಿ ಇನ್ನೂ ಮುಕ್ತಗೊಂಡಿಲ್ಲ.

‘ಎರಡೂ ಗುಡಿಗಳಲ್ಲಿ ವಿಗ್ರಹಗಳು ಸುಂದರವಾಗಿವೆ, ನಿತ್ಯ ಪೂಜೆ ನಡೆಯುತ್ತಿದೆ. ಆದರೆ ಭಕ್ತರಿಗೆ ಮಾತ್ರ ದರ್ಶನ ಭಾಗ್ಯ ಇರಲಿಲ್ಲ. ಅಲ್ಲಿ ಆಧುನಿಕ ತಡೆಬೇಲಿ ಹಾಕಿ, ಸೇವಾ ದರಗಳ ಕುರಿತು ಫಲಕ ಹಾಕಲಾಗಿತ್ತು. ಸದ್ಯ ಅದೆಲ್ಲವನ್ನೂ ತೆಗೆದು ಭಕ್ತರಿಂದ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ’ ಎಂದು ಎಎಸ್ಐ ಅಧೀಕ್ಷಕರು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-25-747490848

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.