ಹೊಸಪೇಟೆ: ವಿಶ್ವ ಪಾರಂಪರಿಕ ತಾಣ ಹಂಪಿಯ ವಿರೂಪಾಕ್ಷ ದೇವಸ್ಥಾನದ ವಾಹನ ನಿಲುಗಡೆ ಸ್ಥಳ ಸಮೀಪ ಬಿಎಂಎಂ ಇಸ್ಪಾತ್ ಕಂಪನಿಯ ಸಾರ್ವಜನಿಕ ಹೊಣೆಗಾರಿಕೆ ನಿಧಿಯಡಿಯಲ್ಲಿ (ಸಿಎಸ್ಆರ್) ಅತ್ಯಾಧುನಿಕ ಶೌಚಾಲಯ ನಿರ್ಮಿಸಲಾಗಿದ್ದು, ಬಳಕೆಗೆ ದುಬಾರಿ ಬೆಲೆಯಿಂದಾಗಿ ಗಮನ ಸೆಳೆದಿದೆ.

ಈಗ ಬಳಕೆಯಲ್ಲಿರುವ ಸಾರ್ವಜನಿಕ ಶೌಚಾಲಯದ ಸಮೀಪದಲ್ಲೇ ಈ ಆಧುನಿಕ ಸೌಲಭ್ಯವಿರುವ ಹಾಗೂ ಅತ್ಯಂತ ಸ್ವಚ್ಛತೆಯಿಂದ ಕೂಡಿದ ಶೌಚಾಲಯ ನಿರ್ಮಿಸಲಾಗಿದ್ದು, ಲವಾಟೊ ಕಂಪನಿ ಈ ಶೌಚಾಲಯದ ಸಂಪೂರ್ಣ ನಿರ್ವಹಣೆಯ ಹೊಣೆ ಹೊತ್ತುಕೊಂಡಿದೆ.

ಪ್ರತಿಷ್ಠಿತ ಖಾಸಗಿ ಸಂಸ್ಥೆಯೊಂದು ನಡೆಸುವ ದೇಶದ ಮೊದಲ ಸಾರ್ವಜನಿಕ ಶೌಚಾಲಯ ಇದು ಎಂದು ಹೇಳಲಾಗುತ್ತಿದ್ದು, ಮಾರ್ಚ್ 20ರಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಶೌಚಾಲಯ ಉದ್ಘಾಟಿಸಿದ್ದಾರೆ. ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ಹಂಪಿ ವಿಶ್ವಪಾರಂಪರಿಕ ತಾಣ ಪ್ರದೇಶ ನಿರ್ವಹಣಾ ಪ್ರಾಧಿಕಾರ ಆಯುಕ್ತ ರಮೇಶ್ ವಟಗಲ್, ಬಿಎಂಎಂ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಗಣೇಶ್ ಹೆಗಡೆ, ಅರ್ಜುನ್ ಟೂರ್ಸ್ನ ಎಂಡಿ ರವಿ, ಲವಾಟೊದ ಸಂಸ್ಥಾಪಕ ಮತ್ತು ಎಂಡಿ ನವೀನ್ ಸಿಂಗ್ ಇದ್ದರು.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್ಐ) ಒಳಪಟ್ಟ ಪಾರಂಪರಿಕ ಸ್ಮಾರಕಗಳನ್ನು ಒಳಗೊಂಡ ಸ್ಥಳದಲ್ಲಿ ಖಾಸಗಿ ಕಂಪನಿಯೊಂದು ಸಾರ್ವಜನಿಕ ಶೌಚಾಲಯ ನಡೆಸುತ್ತಿರುವ ಮೊದಲ ನಿದರ್ಶನವೂ ಇದು ಎಂದು ಹೇಳಲಾಗುತ್ತಿದ್ದು, ಇಲ್ಲಿನ ಅತ್ಯಂತ ಸ್ವಚ್ಛ ಪರಿಸರ, ಎದೆಹಾಲು ಉಣಿಸಲು ವ್ಯವಸ್ಥೆ, ಸೋಪು, ಶಾಂಪು, ಬ್ರೆಶ್ನಂತಹ ಅಗತ್ಯದ ಸಾಮಗ್ರಿ ಖರೀದಿಸಲು ವ್ಯವಸ್ಥೆ ಸಹಿತ ಎಲ್ಲ ಆಯಾಮದಲ್ಲೂ ಅತ್ಯಂತ ಉತ್ತಮ ವ್ಯವಸ್ಥೆಯನ್ನು ಇಲ್ಲಿ ಕಲ್ಪಿಸಲಾಗಿದೆ. ಪ್ರತ್ಯೇಕ ಕೊಠಡಿ ಬಾಡಿಗೆಗೆ ಪಡೆಯುವ ಅಗತ್ಯವೇ ಇಲ್ಲದೆ ಇಲ್ಲೇ ಅಗತ್ಯದ ಕೆಲಸ ಪೂರೈಸಿ ಪ್ರವಾಸಿ ತಾಣಗಳನ್ನು ನೋಡಲು ತೆರಳಬಹುದಾಗಿದೆ.

ದರ ದುಬಾರಿ: ಶೌಚಾಲಯ ಬಳಸಿದರೆ ₹30, ಮುಖತೊಳೆದು ಬಟ್ಟೆ ಬದಲಿಸಿ ಬರುವುದಾದರೆ ₹70, ಸ್ನಾನ ಮಾಡುವುದಾದರೆ ₹250, ಖಾಸಗಿ ಶೌಚಾಲಯ ಬಳಸುವುದಾದರೆ ₹100, ಡಯಾಪರ್ ಬದಲಾವಣೆ, ಮಗುವಿಗೆ ಹಾಲೂಡಿಸಲು ₹30, ಟಿಶ್ಯೂ ಪೇಪರ್ಗೆ ₹10, ಟಾಯ್ಲೆಟ್ ರೋಲ್ ಪೇಪರ್ಗೆ ₹10 ಹಾಗೂ ಕಾರು ತೊಳೆಯುವುದಾದರೆ ₹300 ದರ ನಿಗದಿಪಡಿಸಲಾಗಿದೆ.

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ದುಬಾರಿ ದರವನ್ನು ಸಮರ್ಥಿಸಿಕೊಂಡಿದ್ದು, ಆಧುನಿಕ ಸೌಲಭ್ಯದ ಶುಚಿ ಶೌಚಾಲಯದ ಅಗತ್ಯ ಹಂಪಿಗೆ ಇತ್ತು, ಅದು ಈಗ ಸಾಕಾರಗೊಂಡಿದೆ ಎಂದು ಹೇಳಿದ್ದಾರೆ.

‘ಅತ್ಯಂತ ಸ್ವಚ್ಛ ಶೌಚಾಲಯದ ಅಗತ್ಯ ಇದೆ’

‘ದುಬಾರಿ ಎಂದು ಭಾವಿಸಬೇಕಿಲ್ಲ. ವಿದೇಶಿ ಪ್ರವಾಸಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಹಂಪಿಯಲ್ಲಿ ಇಂತಹ ಇನ್ನಷ್ಟು ಶೌಚಾಲಯಗಳು ಬೇಕು. ಸದ್ಯ ಮೊದಲ ಬಾರಿಗೆ ಇಂತಹ ಶೌಚಾಲಯ ಆರಂಭವಾಗಿದೆ. ಪ್ರತ್ಯೇಕ ಕೊಠಡಿ ಬಾಡಿಗೆಗೆ ಪಡೆಯದೆ ಇಲ್ಲೇ ಬಟ್ಟೆ ಬದಲಿಸಿ, ಮಕ್ಕಳಿಗೆ ಹಾಲುಣಿಸಿ, ಸ್ನಾನ ಮಾಡಿ ಹೋಗಬಹುದು. ದುಡ್ಡು ಇದ್ದವರಷ್ಟೇ ಇದನ್ನು ಬಳಸಲಿ, ಅವರಿಗಾಗಿಯೇ ಇದನ್ನು ಸಿದ್ಧಪಡಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಇನ್ನೊಂದು ಶೌಚಾಲಯವೂ ಬರಲಿದೆ

ಸ್ವದೇಶ್ 2.0 ಯೋಜನೆಯಡಿಯಲ್ಲಿ ಒಟ್ಟು 20 ಸ್ಥಳಗಳಲ್ಲಿ ಆಧುನಿಕ ಶೌಚಾಲಯ ನಿರ್ಮಾಣ
ವಾಗಲಿದ್ದು, ಅದರ ಭಾಗವಾದ ಒಂದು ಸ್ವಚ್ಛ, ಸುಂದರ ಶೌಚಾಲಯ ಇಲ್ಲೇ ನಿರ್ಮಾಣವಾಗಲಿದೆ. ಹೀಗಾಗಿ ಹಂಪಿ ವಿರೂಪಾಕ್ಷ ದೇವಸ್ಥಾನದತ್ತ ಬರುವ ಪ್ರವಾಸಿಗರಿಗೆ ಇನ್ನು ಮುಂದೆ ಕೊಠಡಿ ಬಾಡಿಗೆ ಪಡೆಯದಿದ್ದರೂ ಬಟ್ಟೆ ಬದಲಿಸಲು, ಶೌಚ, ಸ್ನಾನಕ್ಕೆ ಆಧುನಿಕ ವ್ಯವಸ್ಥೆಗಳು ಲಭಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.