ಹೊಸಪೇಟೆ (ವಿಜಯನಗರ): ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಸ್ಮಾರಕಗಳ ಸಂರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳಲು ‘ಯುನೆಸ್ಕೊ’ ತಂಡ ಮೇ ತಿಂಗಳಲ್ಲಿ ಹಂಪಿಗೆ ಭೇಟಿ ನೀಡಲಿದೆ. ಕೃಷಿ ಭೂಮಿಯಲ್ಲಿರುವ ಸ್ಮಾರಕಗಳ ರಕ್ಷಣೆಗೆ ಅದು ಒತ್ತು ನೀಡಿದರೆ, ಹೊಸ ನಿಯಮಗಳು ಜಾರಿಯಾಗುವವರೇ ಎಂಬ ಆತಂಕ ರೈತರಲ್ಲಿ ಮೂಡಿದೆ.

ವಿಜಯನಗರ ಜಿಲ್ಲೆಯ ಹಂಪಿ, ಕಮಲಾಪುರ ಮತ್ತು ಕೊಪ್ಪಳ ಜಿಲ್ಲೆಯ ಆನೆಗುಂದಿ, ಅಂಜನಾದ್ರಿ ಸುತ್ತಮುತ್ತಲಿನ 41 ಚದರ ಕಿಲೋಮೀಟರ್ ಪ್ರದೇಶ ವಿಶ್ವ ಪಾರಂಪರಿಕ ತಾಣ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್ಐ) ಒಳಪಟ್ಟ 56 ಸ್ಮಾರಕಗಳು ಹಾಗೂ ರಾಜ್ಯ ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ಒಳಪಟ್ಟ 2,600ಕ್ಕೂ ಅಧಿಕ ಸ್ಮಾರಕಗಳಿವೆ. ‘ಯುನೆಸ್ಕೊ’ ತಂಡ ಕೇಂದ್ರ ಅಥವಾ ರಾಜ್ಯ ಸುಪರ್ದಿಯ ಸ್ಮಾರಕ ಎಂಬುದನ್ನು ಪ್ರತ್ಯೇಕಿಸಿ ನೋಡದೆ, ತನ್ನ ವರದಿ ಸಿದ್ಧಪಡಿಸುವ ಕಾರಣಕ್ಕೆ ರೈತರಲ್ಲಿ ಕಳವಳ ಹೆಚ್ಚಿದೆ.

ಹಂಪಿ ಸಮೀಪದ ತುರ್ತಾ ಕಾಲುವೆ ಸುತ್ತಮುತ್ತಲಿನ ಕೃಷಿ ಜಮೀನು, ವೀರಭದ್ರ ದೇವಸ್ಥಾನ, ಉಗ್ರ ನರಸಿಂಹ ದೇವಸ್ಥಾನ, ವಿರೂಪಾಕ್ಷ ದೇವಸ್ಥಾನ, ವಿಜಯ ವಿಠಲ ದೇವಸ್ಥಾನ ಸಹಿತ ಪ್ರಮುಖ ಸ್ಮಾರಕಗಳ ಸಮೀಪದಲ್ಲಿ ಕೃಷಿ ಜಮೀನುಗಳಿವೆ. ಅಲ್ಲಿ ನೂರಾರು ಸಂಖ್ಯೆಯ ಸಣ್ಣಪುಟ್ಟ ಸ್ಮಾರಕಗಳಿವೆ. ಇದಲ್ಲದೆ ವರದರಾಜಮ್ಮನಪೇಟೆ, ಗೋರಿ ಮಾಗಣಿ, ಹೂವಿನ ಬಾಗಿಲು, ಶಂಕರನಾರಾಯಣ ಬಾಗಿಲು, ಸಿಂಗನಾಥನಹಳ್ಳಿ, ನಿಂಬಾಪುರ, ಕೃಷ್ಣಾಪುರ, ಸೀತಾರಾಮ ತಾಂಡ, ಕಡ್ಡಿರಾಂಪುರ ಮೊದಲಾದೆಡೆ ಸಹ ಕೃಷಿ ಕಾರ್ಯ ನಡೆಯುತ್ತಿದೆ. ಇಲ್ಲೂ ನೂರಾರು ಸ್ಮಾರಕಗಳಿವೆ.

ಹೆಚ್ಚಿನ ಕಡೆಗಳಲ್ಲಿ ಕೃಷಿ ಚಟುವಟಿಕೆಗಳಿಗೆ ವಿಜಯನಗರ ಕಾಲದಲ್ಲೇ ನಿರ್ಮಾಣಗೊಂಡ ಕಾಲುವೆಗಳ ನೀರಿನ ಸೌಲಭ್ಯ ಇದೆ. ಕಾಲುವೆ ಸಂಪರ್ಕ ಇಲ್ಲದಲ್ಲಿ ಮಳೆ ಆಧಾರಿತ, ಕೊಳವೆಬಾವಿ ಆಧಾರಿತ ಕೃಷಿ ನಡೆಯುತ್ತಿದೆ. ಕಬ್ಬು, ಭತ್ತ, ಬಾಳೆ ಈ ಭಾಗದ ಪ್ರಮುಖ ಬೆಳೆ. ಈ ಕೃಷಿಗೆ ಅಧಿಕ ಪ್ರಮಾಣದಲ್ಲಿ ನೀರು ಬೇಕು, ಹೀಗೆ ನೀರಿನಿಂದ ಆವೃತ್ತವಾಗುವ ಸ್ಮಾರಕಗಳು ನಿಧಾನವಾಗಿ ಕುಸಿಯುವ, ವಿರೂಪಗೊಳ್ಳುವ ಸಾಧ್ಯತೆ ಇದೆ ಎಂಬ ಬಗ್ಗೆ ದಶಕದ ಹಿಂದೆಯೆ ಯುನೆಸ್ಕೊ ಆತಂಕ ವ್ಯಕ್ತಪಡಿಸಿತ್ತು. ಒಂದು ವೇಳೆ ಈ ಬಾರಿ ಕೃಷಿ ಜಮೀನುಗಳತ್ತ ಅದರ ಗಮನ ಹರಿದರೆ ಮತ್ತೆ ಆತಂಕ ನಿಶ್ಚಿತ ಎಂದು ಹಲವು ಕೃಷಿಕರು ಅಳಲು ತೋಡಿಕೊಂಡರು.

ಹವಾಮ ಅಭಯ: ‘ರೈತರು ಸದ್ಯ ಆತಂಕಪಡುವ ಅಗತ್ಯ ಇಲ್ಲ. ಇಲ್ಲಿ ಕೃಷಿ ಚಟುವಟಿಕೆ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಮೊದಲೇ ನಡೆಯುತ್ತಿತ್ತು, ಬಳಿಕವೂ ನಡೆಯುತ್ತ ಬಂದಿದೆ, ಸ್ಮಾರಕಗಳಿಗೆ ಧಕ್ಕೆ ಆಗದ ರೀತಿಯಲ್ಲಿ ಕೃಷಿ ಚಟುವಟಿಕೆ ನಡೆಸಿದರೆ ಯುನೆಸ್ಕೊ ತಂಡ ಆಕ್ಷೇಪ ವ್ಯಕ್ತಪಡಿಸುವ ಸಾಧ್ಯತೆ ಇಲ್ಲ’ ಎಂದು ಹಂಪಿ ವಿಶ್ವಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರದ (ಹವಾಮ) ಆಯುಕ್ತ ರಮೇಶ್ ವಟಗಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.