ಹೊಸಪೇಟೆ (ವಿಜಯನಗರ): ಹಂಪಿಯ ಹರಾಜರಾಮ ದೇವಸ್ಥಾನದ ದಕ್ಷಿಣದ ಕಡೆಯಲ್ಲಿ ಉತ್ಖನನ ಮಾಡುವ ವೇಳೆ ವಿಜಯನಗರ ಕಾಲಕ್ಕೆ ಸೇರಿದ ಆನೆಯ ಸುಂದರವಾದ ಕಲ್ಲಿನ ಕೆತ್ತನೆ ಪತ್ತೆಯಾಗಿದೆ. ಈ ದೇವಸ್ಥಾನದ ದಕ್ಷಿಣ ದ್ವಾರದ ಗೋಡೆಯಲ್ಲಿ ಒಂದು ಬದಿಯಲ್ಲಿ ಒಂದು ಆನೆಯ ಸುಂದರ ಕಲ್ಲಿನ ಕೆತ್ತನೆ ಇತ್ತು. ಇನ್ನೊಂದು ಬದಿಯಲ್ಲಿ ಸಹ ಇದೇ ರೀತಿಯ ಕೆತ್ತನೆ ಇರಬೇಕಿತ್ತು, ಆದರೆ ಅದು ಕಣ್ಮರೆಯಾಗಿತ್ತು. ನೆಲವನ್ನು ಅಗೆದು ಸಮತಟ್ಟುಗೊಳಿಸಿ, ಅದರ ಮೇಲೆ ಕಲ್ಲು ಚಪ್ಪಡಿಯನ್ನು ಹಾಸುವ ಕೆಲಸ ಇದೀಗ ನಡೆಯುತ್ತಿದ್ದು, ಈ ಹಂತದಲ್ಲೇ ಬಹುತೇಕ ಕಣ್ಮರೆಯಾದ ಆನೆಯ ಸುಂದರ ಕಲಾಕೃತಿ ಪತ್ತೆಯಾಗಿದೆ.

ಕ್ರಿ.ಶ.1,565ರ ತಾಳಿಕೋಟೆ ಯುದ್ಧದ ನಂತರ ಶತ್ರುಗಳ ದಾಳಿಗೆ ತುತ್ತಾಗಿ ಹಂಪಿಯ ಅನೇಕ ಸ್ಮಾರಕಗಳು, ಬೃಹತ್ ಕಟ್ಟಡ, ಅರಮನೆಗಳು ನಾಶ ವಾಗಿದ್ದವು. ಈ ಹಿಂದೆ ನಡೆದ ಉತ್ಖನನ ವೇಳೆ ಸಾಕಷ್ಟು ಅವಶೇಷ ಸಿಕ್ಕಿದ್ದವು. ಇದೀಗ ಮತ್ತೊಂದು ಅವಶೇಷ ಸಿಕ್ಕಂತಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಅಧೀಕ್ಷಕ ಕೆ.ರಾಮಕೃಷ್ಣ ರೆಡ್ಡಿ ಅವರು, ಈ ಆನೆಯ ಶಿಲ್ಪ ಕಲಾಕೃತಿಯನ್ನು ಗೋಡೆಯಲ್ಲಿ ಎಲ್ಲಿರಬೇಕಿತ್ತೋ ಅಲ್ಲಿ ಅಳವಡಿ ಸುವ ಕೆಲಸ ನಡೆಯಲಿದೆ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-25-27106381

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.