ಹೊಸಪೇಟೆ (ವಿಜಯನಗರ): ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ರಥಬೀದಿಯಲ್ಲಿ ಗುರುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿರೂಪಾಕ್ಷ ಮತ್ತು ಪಂಪಾಂಬಿಕಾ ದೇವಿಯರ ಉತ್ಸವ ಮೂರ್ತಿಗಳಿದ್ದ ದೊಡ್ಡ ರಥ ಹಾಗೂ ಚಂದ್ರಮೌಳೇಶ್ವರ ಸಹಿತ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರಿದ್ದ ಸಣ್ಣ ರಥಗಳ ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರು ಹೈದರಾಬಾದ್ನ ನಿಜಾಮ ಕಾಣಿಕೆಯಾಗಿ ನೀಡಿದ ಕಿರೀಟ ತೊಟ್ಟು, ಗೌನು ಧರಿಸಿ ಚಂದ್ರಮೌಳೇಶ್ವರನ ಜತೆಗೆ ಚಿಕ್ಕ ರಥ ಏರಿದರೆ, ವಿರೂಪಾಕ್ಷ–ಪಂಪಾಂಬಿಕೆಯರ ಉತ್ಸವ ಮೂರ್ತಿಗಳು ದೊಡ್ಡ ರಥದಲ್ಲಿ ರಾರಾಜಿಸಿದವು. ದೇವಸ್ಥಾನದ ಪಟ್ಟದ ಆನೆ ಮೊದಲಿಗೆ ರಥಗಳಿಗೆ ಸ್ವಾಗತ ಕೋರಿತು. ಬಳಿಕ ಜೋಡಿ ರಥಗಳು ಒಂದರ ಹಿಂದೆ ಮತ್ತೊಂದರಂತೆ ಸಾಗಿದಾಗ ಭಕ್ತರು ಹರ್ಷೋದ್ಗಾರ ಮಾಡಿದರು. ರಥಗಳಿಗೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿ ಭಾವ ಸಮರ್ಪಿಸಿದರು. ಹೊಸಪೇಟೆಯ ಮ್ಯಾಸಕೇರಿ ಮತ್ತು ಕಮಲಾಪುರದ ಮನ್ಮಥಕೇರಿ ಯುವಕರು ರಥದ ಸನ್ನೆ ಹಾಕುವ ಹೊಣೆಗಾರಿಕೆ ನಿಭಾಯಿಸಿದರು.

ವಿಜಯನಗರ ಸಾಮ್ರಾಜ್ಯದ ಪತನದ ನಂತರವೂ ಆನೆಗುಂದಿಯಲ್ಲಿ ಸಾಮಂತ ಅರಸರ ಆಳ್ವಿಕೆ ಮುಂದುವರಿದಿತ್ತು. ಆ ಮನೆತನದವರು ಈಗಲೂ ಇರುವ ಕಾರಣ ರಥೋತ್ಸವದ ದಿನ ಬೆಳಿಗ್ಗೆ ವಿರೂಪಾಕ್ಷ ದೇವಸ್ಥಾನಕ್ಕೆ ಪೂರ್ವಾಭಿಮುಖವಾಗಿ ಪ್ರವೇಶಿಸಿ, ವಿದ್ಯಾರಣ್ಯ ಗುರುಗಳಿಗೆ ಕಿರೀಟ ತೊಡಿಸುವ ಹಾಗೂ ಮಡಿ ತೇರು ಎಳೆಯುವ ಸಂಪ್ರದಾಯ ನಡೆಯುತ್ತಿದೆ. ಬೆಳಿಗ್ಗೆ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರು ಬುಕ್ಕದೇವರಾಯ ಕೊಟ್ಟಂತಹ ಕಿರೀಟ ಧರಿಸಿ ಬ್ರಹ್ಮರಥೋತ್ಸವ ಶಾಸ್ತ್ರ ನೆರವೇರಿಸಿದ್ದರು.

ಚಿನ್ನದ ಮುಖವಾಡ, ಕಿರೀಟ: ವಿರೂಪಾಕ್ಷನಿಗೆ ವಿಶೇಷ ಸಂದರ್ಭಗಳಲ್ಲಿ ಮಾತ್ರ ತೊಡಿಸುವ ಚಿನ್ನದ ಮುಖವಾಡ, ಕಿರೀಟ ಕಂಡು ಭಕ್ತರು ಪುಳಕಿತಗೊಂಡರು. ವಿಜಯನಗರದ ಅರಸ ಕೃಷ್ಣದೇವರಾಯ ಮಾಡಿಸಿದ್ದೆನ್ನಲಾದ ಈ ಕಿರೀಟ 6 ಕೆ.ಜಿ.ತೂಕವಿದ್ದು, ಮಹಾಶಿವರಾತ್ರಿ, ರಥೋತ್ಸವ ಸಹಿತ ವಿಶೇಷ ಸಂದರ್ಭಗಳಲ್ಲಿ ಮಾತ್ರ ತೊಡಿಸಲಾಗುತ್ತದೆ. ಇತರ ದಿನಗಳಲ್ಲಿ ಇದು ಲಾಕರ್ನಲ್ಲಿರುತ್ತದೆ. ಹಂಪಿಯ ವಿದ್ಯಾರಣ್ಯ ಮಹಾಸ್ವಾಮೀಜಿ ಅವರು ಶಿವನಿಗೆ ಅಭಿಷೇಕ ಮಾಡಿ ಚಿನ್ನದ ಕವಚ ತೊಡಿಸಿದರು.

ಹಂಪಿಯ ಐ. ನಾಗರಾಜ ಅವರು ಹರಾಜಿನಲ್ಲಿ ದೇವರ ಪಟವನ್ನು ₹1.08 ಲಕ್ಷಕ್ಕೆ ಪಡೆದುಕೊಂಡರು.

ಇಂದು ಕಡಬಿನ ಕಾಳಗ: ಹಂಪಿ ರಥೋತ್ಸವದ ಮರುದಿನ ಅಂದರೆ ಶುಕ್ರವಾರ ರಜತ ಅಶ್ವವಾಹನೋತ್ಸವ (ಮೃಗಯಾತ್ರೆ) ಕಿರಾತಾಲಂಕಾರ, ಕಡಬಿನ ಕಾಳಗ ನಡೆಯಲಿದೆ. ಶನಿವಾರ ಬೆಳಿಗ್ಗೆ 10ಕ್ಕೆ ಚಕ್ರತೀರ್ಥ ಕೋದಂಡರಾಮಸ್ವಾಮಿ ಕಲ್ಯಾಣೋತ್ಸವ ಹಾಗೂ ರಥೋತ್ಸವ, ರಾತ್ರಿ 8 ಗಂಟೆಗೆ ಪಂಪಾ ವಿರೂಪಾಕ್ಷೇಶ್ವರ ಸ್ವಾಮಿಯ ತೆಪ್ಪೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.