ಹೊಸಪೇಟೆ (ವಿಜಯನಗರ): ಹಂಪಿ ವಿರೂಪಾಕ್ಷ ದೇವಸ್ಥಾನದ ಪ್ರಧಾನ ಗೋಪುರದ ಒಳಭಾಗದಲ್ಲಿ ಮಂಟಪ ಇದ್ದು, ಅದಕ್ಕೆ ಗೋಡೆ ಕಟ್ಟಿ ಕಚೇರಿಯನ್ನಾಗಿ ಪರಿವರ್ತಿಸಲಾಗಿತ್ತು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಮಂಗಳವಾರ ಮೂಲ ರಚನೆಗೆ ಧಕ್ಕೆ ತರುವ ರೀತಿಯ ಗೋಡೆಗಳನ್ನು ಕೆಡವಿ ಹಾಕಿದೆ.

ಎಎಸ್ಐ ಅಧೀಕ್ಷಕ ಕೆ.ರಾಮಕೃಷ್ಣ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಈ ತೆರವು ಕಾರ್ಯಾಚರಣೆ ನಡೆಯಿತು. ಅಧೀಕ್ಷಕರ ಈ ಕೆಲಸಕ್ಕೆ ಸಾರ್ವಜನಿಕರು, ಪ್ರವಾಸಿ ಮಾರ್ಗದರ್ಶಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

‘ಗೋಪುರದ ಒಳಭಾಗದಲ್ಲಿ ಮಂಟಪ ನಿರ್ಮಿಸಿದ್ದು ಹಿಂದಿನ ಕಾಲದಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರ ವಿಶ್ರಾಂತಿಗೆ ಆಗಿತ್ತು. ಅದರ ಪಕ್ಕದಲ್ಲೇ ಒಂದು ಶಿವನ ವಿಗ್ರಹವೂ ಇದೆ. ಅದಕ್ಕೆ ನಿತ್ಯ ಅಭಿಷೇಕ ಆಗುತ್ತಿರಲಿಲ್ಲ. ಇದೀಗ ಮೂಲ ರಚನೆಯ ಹೊರತಾಗಿ ನಿರ್ಮಿಸಲಾಗಿದ್ದ ಗೋಡೆ ತೆರವುಗೊಳಿಸಿದ್ದರಿಂದ ಮಂಟಪ ಸುಂದರವಾಗಿ ಕಾಣಿಸುತ್ತಿದೆ ಮತ್ತು ಶಿವನ ದರ್ಶನವೂ ಆಗುತ್ತಿದೆ. ಭಕ್ತರು, ಪ್ರವಾಸಿಗರ ಬಹುವರ್ಷಗಳ ಬೇಡಿಕೆಯನ್ನು ಎಎಸ್ಐ ಅಧೀಕ್ಷಕರು ನೆರವೇರಿಸಿದ್ದಕ್ಕೆ ಧನ್ಯವಾದಗಳು’ ಎಂದು ಹಂಪಿ ಸ್ಮಾರಕಗಳ ಆಸಕ್ತರಾದ ಶಿವಕುಮಾರ ಮಾಳಗಿ ತಿಳಿಸಿದರು.

ರಾಜ್ಯ ಪುರಾತತ್ವ ಇಲಾಖೆ ಕೆಲಸಕ್ಕೂ ಶ್ಲಾಘನೆ: ಸೀತಾರಾಮ ತಾಂಡಾಕ್ಕೆ ಹೋಗುವ ರಸ್ತೆ ಸಮೀಪ ಎರಡನೇ ಪೆನುಗೊಂಡ ದ್ವಾರದ ಬಳಿ ಕರಿಯ ತಿರುವೆಂಗಳನಾಥ ದೇವಸ್ಥಾನ ಇದ್ದು, ಈಚಿನ ದಿನಗಳಲ್ಲಿ ಅದು ಕುಡುಕರ ಅಡ್ಡೆಯಾಗಿತ್ತು. ಈ ಬಗ್ಗೆ ರಾಜ್ಯ ಪುರಾತತ್ವ, ವಸ್ತುಸಂಗ್ರಹಾಲಯ ಇಲಾಖೆಯ ಉಪನಿರ್ದೇಶಕ ಶೇಜೇಶ್ವರ್ ಗಮನಕ್ಕೆ ತಂದಾಗ ಅವರು ಅದರ ಬಗ್ಗೆ ಕಾಳಜಿ ವಹಿಸಿ, ಇಡೀ ಪರಿಸರವನ್ನು ಸ್ವಚ್ಛಗೊಳಿಸುವ ಕೆಲಸ ಮಾಡಿದರು. ಹಂಪಿಗೆ ಇಂತಹ ಅಧಿಕಾರಿಗಳ ಅಗತ್ಯ ಇದೆ. ಹೀಗಿದ್ದರೆ ಮಾತ್ರ ಇಲ್ಲಿನ ಪಾರಂಪರಿಕ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಲು ಸಾಧ್ಯ ಎಂದು ಮಾಳಗಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಇಲ್ಲಿಗೆ ಸಮೀಪದಲ್ಲೇ ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನ ಇದೆ. ಇಲ್ಲಿ ಇಂದಿಗೂ ಪೂಜೆ ನಡೆಯುತ್ತದೆ. ಆದರೆ ಸೂಕ್ತ ನಿರ್ವಹಣೆ ಇಲ್ಲ, ಇದರ ಬಗ್ಗೆಯೂ ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-25-176073151

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.