ಹೊಸಪೇಟೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಸಬಲೀಕರಣ ಘಟಕ, ಅಕ್ಕ ಪಡೆ ಹಾಗೂ ವಿಜಯ ಮಹಿಳಾ ಸುರಕ್ಷಾ ಪಡೆ ತಂಡಗಳ ವತಿಯಿಂದ ಹಂಪಿ ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಮಹಿಳಾ ಸುರಕ್ಷತೆ ಮತ್ತು ಭದ್ರತೆಯ ಕುರಿತು ಸೋಮವಾರ ವಿಶೇಷ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ವಿರೂಪಾಕ್ಷ ದೇವಾಲಯ, ರಥ ಬೀದಿ ಹಾಗೂ ಬಸ್ ನಿಲ್ದಾಣದ ಸುತ್ತಮುತ್ತ ಸಾರ್ವಜನಿಕರು ಮತ್ತು ಪ್ರವಾಸಿ ಮಹಿಳೆಯರಿಗೆ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಯಿತು.

ಜಿಲ್ಲಾ ಮಿಷನ್ ಸಂಯೋಜಕರಾದ ವಿದ್ಯಾ ಹಾಗೂ ಜೆಂಡರ್ ಸ್ಪೆಷಲಿಸ್ಟ್ ಅನ್ನಪೂರ್ಣ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಾದ ‘ಮಿಷನ್ ಶಕ್ತಿ’, ‘ಬೇಟಿ ಬಚಾವೋ ಬೇಟಿ ಪಡಾವೋ’ ಮತ್ತು ‘ಸಖಿ ಒನ್ ಸ್ಟಾಪ್ ಸೆಂಟರ್’ಗಳ ಸೌಲಭ್ಯಗಳನ್ನು ಮಹಿಳೆಯರು ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ವಿವರಿಸಿದರು.

ಸಖಿ ಕೇಂದ್ರದ ನಿರ್ವಾಹಕಿ ಬಶೀರಾ ಬಿ. ಅವರು ಸಂಕಷ್ಟದಲ್ಲಿರುವ ಮಹಿಳೆಯರಿಗೆ ಕೇಂದ್ರವು ನೀಡುವ ಆಸರೆಯ ಬಗ್ಗೆ ಮಾಹಿತಿ ನೀಡಿದರು. ಯಾವುದೇ ಅಹಿತಕರ ಘಟನೆಗಳು ನಡೆದಾಗ ಅಥವಾ ತುರ್ತು ಸಂದರ್ಭದಲ್ಲಿ ಮಹಿಳಾ ಸಹಾಯವಾಣಿ: 181 ಪೊಲೀಸ್ ತುರ್ತು ಸೇವೆ: 112, ಮಕ್ಕಳ ಸಹಾಯವಾಣಿ: 1098, ಸೈಬರ್ ಕ್ರೈಂ ಸಹಾಯವಾಣಿ: 1930 ಗೆ ಸಂಪರ್ಕಿಸಬಹುದು ಎಂಬ ಮಾಹಿತಿ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-25-423986926

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.